
ಕಾಶಿಮಠಾದೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಶ್ರೀಪಾದರ 25 ವರ್ಷದ ಚಾತುರ್ಮಸ ಇದರ ಅಂಗವಾಗಿ ಇತ್ತೀಚಿಗೆ ಶ್ರೀಮತಿ ಮಾಯಾ ಕಾಮತ್ ಈಶ್ವರ ನಗರ ಮಣಿಪಾಲ, ರಮ್ಯಾ ಮಲ್ಯ ಕುಂದಾಪುರ ಮತ್ತು ಬಳಗ ದವರಿಂದ ಶ್ರೀ ಸಂಸ್ಥಾನ ದೇವರು ಮತ್ತು ಶ್ರೀಪಾದರ ಸಮ್ಮುಖದಲ್ಲಿ ನಿರಂತರ ೨ ಗಂಟೆಗಳ ಕಾಲ ಭಜನಾ ಸಂದ್ಯಾ ಕಾರ್ಯಕ್ರಮದಲ್ಲಿ ಮರಾಠಿ , ಕನ್ನಡ , ದಾಸರ ಪದಗಳು , ಕೊಂಕಣಿ ಭಜನೆ ಹಾಡಿದರು .
ಪೂಜ್ಯ ಶ್ರೀಗಳು ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು , ಹಾರ್ಮೋನಿಯಂ ನಲ್ಲಿ ಹರೀಶ್ ಭಟ್ ಡೆಲ್ಲಿ , ತಬಲದಲ್ಲಿ ಮಹೇಶ್ ಶೆಣೈ ಮೂಡಬಿದ್ರಿ, ತಾಳದಲ್ಲಿ ಕೃಷ್ಣಾನಂದ ಸಹಕರಿಸಿದರು , ಪ್ರಮೀಳಾ ಪ್ರಭು ಪೆರ್ಡೂರ್ ಹಾಗೂ ದೇವಿಕ ಪ್ರಭು ಕುಂದಾಪುರ ಉಪಸ್ಥಿತರಿದ್ದರು.
