ಮುನಿಯಾಲ್‌ನ ಶ್ರೀ ವೆಂಕಟರಮಣ ದೇವಸ್ಥಾನ ; ಉಚಿತ ನೇತ್ರ ತಪಾಸಣಾ ಹಾಗೂ ಆರೋಗ್ಯ ಶಿಬಿರ

0
6

ಕೌಂಡಿಣ್ಯ ಗೋತ್ರ ನಾಯಕ್ ಕುಲಪುರುಷ ಸಮಿತಿ (ರಿ.) ಉಡುಪಿ ಇದರ  ವತಿಯಿಂದ ಉಚಿತ ನೇತ್ರ ತಪಾಸಣಾ ಹಾಗೂ ಆರೋಗ್ಯ ಶಿಬಿರ ಮುನಿಯಲ್ ದೇವಳದಲ್ಲಿ ಜರಗಿತು .

ಕೌಂಡಿಣ್ಯ ಗೋತ್ರ ನಾಯಕ್ ಕುಲಪುರುಷ ಸಮಿತಿ (ರಿ.) ಇವರ ವತಿಯಿಂದ, ಹಾಗೂ ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯಶಾಲೆ ಹಾಗೂ ಅನಂತ ಜ್ಯೋತಿ ನೇತ್ರಾಲಯ, ಉಡುಪಿ ಮತ್ತು ಶ್ರೀ ಗಜಾನನ ನಾಯಕ್ – I-Needs Optical Udupi ಅಲ್ಲದೆ ಶ್ರೀ ಭುವನೇಂದ್ರ ಪಂಚಕರ್ಮ ಕೇಂದ್ರ, ಕೋಟೇಶ್ವರ ಇವರ ಸಹಯೋಗದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಉಚಿತ ನೇತ್ರ ತಪಾಸಣಾ ಹಾಗೂ ಆರೋಗ್ಯ ಶಿಬಿರವನ್ನು  ಭಾನುವಾರ, ಮುನಿಯಾಲ್‌ನ ಶ್ರೀ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಶಿಬಿರವು ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನಡೆಯಿತು. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, 150ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಭಾಗವಹಿಸಿ ಉಚಿತ ನೇತ್ರ ತಪಾಸಣೆ, ಆರೋಗ್ಯ ಸಲಹೆ ಹಾಗೂ ವೈದ್ಯಕೀಯ ಮಾರ್ಗದರ್ಶನದ ಪ್ರಯೋಜನ ಪಡೆದರು.

ಶಿಬಿರದಲ್ಲಿ ನೇತ್ರ ತಪಾಸಣೆಯನ್ನು ಡಾ. ನರೇಂದ್ರ ಶೆಣೈ, ಅನಂತ ಜ್ಯೋತಿ ನೇತ್ರಾಲಯ, ಉಡುಪಿ ಅವರು ನಡೆಸಿಕೊಟ್ಟರು. ಶಿಬಿರಾರ್ಥಿಗಳ ದೃಷ್ಟಿ ಹಾಗೂ ಕಣ್ಣಿನ ಆರೋಗ್ಯವನ್ನು ಪರಿಶೀಲಿಸಿ, ಅಗತ್ಯವಿರುವವರಿಗೆ ಸೂಕ್ತ ವೈದ್ಯಕೀಯ ಸಲಹೆ ಹಾಗೂ ಮುಂದಿನ ಚಿಕಿತ್ಸೆಯ ಕುರಿತು ಮಾರ್ಗದರ್ಶನ ನೀಡಲಾಯಿತು.
ನೇತ್ರ ತಪಾಸಣೆಯ ಸಂದರ್ಭದಲ್ಲಿ ದೃಷ್ಟಿದೋಷ ಕಂಡುಬಂದ ಅರ್ಹ ಫಲಾನುಭವಿಗಳಲ್ಲಿ ಸುಮಾರು 90 ಮಂದಿಗೆ ಅಗತ್ಯ ಕನ್ನಡಕಗಳನ್ನು ವ್ಯವಸ್ಥೆ ಮಾಡಲಾಯಿತು. ಅಲ್ಲದೆ, ಸುಮಾರು 9 ಮಂದಿಯಲ್ಲಿ ಕಣ್ಣಿನ ಪೊರೆ (Cataract) ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ, ಹೆಚ್ಚಿನ ತಪಾಸಣೆ ಹಾಗೂ ಅಗತ್ಯ ಶಸ್ತ್ರಚಿಕಿತ್ಸೆಗಾಗಿ ಸೂಕ್ತ ವೈದ್ಯಕೀಯ ಕೇಂದ್ರಕ್ಕೆ ರೆಫರ್ ಮಾಡಲಾಯಿತು.

ಹೀಗಾಗಿ, ಶಿಬಿರವು ಕೇವಲ ನೇತ್ರ ತಪಾಸಣೆಗೆ ಸೀಮಿತವಾಗದೆ, ಅಗತ್ಯವಿರುವವರಿಗೆ ಮುಂದಿನ ಚಿಕಿತ್ಸೆಗೆ ಸೂಕ್ತ ಮಾರ್ಗದರ್ಶನ ಒದಗಿಸುವ ಮೂಲಕ ಮಹತ್ವದ ಸಮಾಜಮುಖಿ ಸೇವೆಯನ್ನು ಸಲ್ಲಿಸಿತು.

ಶ್ರೀ ಗಜಾನನ ನಾಯಕ್ – I-Needs Optical ಇವರ ವತಿಯಿಂದ ಆಪ್ಟಿಕಲ್ ಸೇವೆ ಹಾಗೂ ಕನ್ನಡಕಗಳ ವ್ಯವಸ್ಥೆಗೆ ಅಗತ್ಯ ಸಹಕಾರ ದೊರೆಯಿತು.
ಶಿಬಿರದಲ್ಲಿ ಡಾ. ದಿನೇಶ್ ಕಾಮತ್ ಹಾಗೂ ಡಾ. ಎನ್.ಎಸ್. ಕಾಮತ್, ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯಶಾಲೆ ಮತ್ತು ಶ್ರೀ ಭುವನೇಂದ್ರ ಪಂಚಕರ್ಮ ಕೇಂದ್ರ, ಕೋಟೇಶ್ವರ ಇವರ ವತಿಯಿಂದ ಆಯುರ್ವೇದ ಚಿಕಿತ್ಸೆ, ದೈಹಿಕ ಆರೋಗ್ಯ ಹಾಗೂ ಫಿಸಿಯೋಥೆರಪಿಗೆ ಸಂಬಂಧಿಸಿದ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಲಾಯಿತು.
ಆರೋಗ್ಯಕರ ಜೀವನಶೈಲಿ, ಆಯುರ್ವೇದ ಚಿಕಿತ್ಸೆಯ ಮಹತ್ವ ಹಾಗೂ ವಿವಿಧ ದೈಹಿಕ ಸಮಸ್ಯೆಗಳಿಗೆ ಸೂಕ್ತ ಆರೈಕೆಯ ಕುರಿತು ಸಾರ್ವಜನಿಕರಿಗೆ ಅಗತ್ಯ ಮಾಹಿತಿಯನ್ನು ನೀಡಲಾಯಿತು.

ವೇದಿಕೆಯ ಕಾರ್ಯಕ್ರಮದಲ್ಲಿ ಶ್ರೀಧರ್ ಪೈ ಹಾಗೂ ಗಣೇಶ್ ಪೈ, ಟ್ರಸ್ಟಿಗಳು, ವೆಂಕಟರಮಣ ದೇವಸ್ಥಾನ, ಮುನಿಯಾಲ್, ಉಪಸ್ಥಿತರಿದ್ದು ಶಿಬಿರಕ್ಕೆ ಶುಭಹಾರೈಸಿದರು.
ಅಲ್ಲದೆ,  ಅಜೆಕಾರ್ ಪ್ರೇಮಾನಂದ ನಾಯಕ್,  ಉಮೇಶ್ ನಾಯಕ್ ಉಡುಪಿ  , ಎಸ್. ಕಮಲಾಕ್ಷ ನಾಯಕ್,ಕುಕ್ಕುಂದೂರು,  ಚಂದ್ರಕಾಂತ ನಾಯಕ್ ಮಣಿಪಾಲ, ಕೆ. ರಾಧಾಕೃಷ್ಣ ನಾಯಕ್ ಉಡುಪಿ,  ಶ್ರೀಪತಿ ನಾಯಕ್ ಕಾರ್ಕಳ, ಸತೀಶ ನಾಯಕ್,  ಅಜೆಕಾರ್ ಅರವಿಂದ ನಾಯಕ್, ಸುಧೀರ್ ನಾಯಕ್ ಹೆಬ್ರಿ, ಕೌಂಡಿಣ್ಯ ಗೋತ್ರ ನಾಯಕ್ ಕುಲಪುರುಷ ಸಮಿತಿ (ರಿ.), ಪಧಾದಿಕಾರಿಗಳು , ದೇವಳದ ಮಹಿಳಾ ಮಂಡಳಿ ಸದಸ್ಯರು   ಶಿಬಿರದ ಯಶಸ್ಸಿಗೆ ಪ್ರೋತ್ಸಾಹ ನೀಡಿದರು.

ಕಾರ್ಯಕ್ರಮದ ಸಮನ್ವಯ ಹಾಗೂ ನಿರ್ವಹಣೆಯಲ್ಲಿ ಡಾ. ಕೃಷ್ಣಾನಂದ ನಾಯಕ್ ಅವರು ಪ್ರಮುಖ ಪಾತ್ರ ವಹಿಸಿದರು. ವರದೇಂದ್ರ ಚಾರಿಟೇಬಲ್ ಟ್ರಸ್ಟ್, ಮುಂಬೈ ಇವರ ವೈದ್ಯಕೀಯ ಸಹಕಾರವೂ ಶಿಬಿರಕ್ಕೆ ದೊರೆಯಿತು.

ಈ ಅರ್ಥಪೂರ್ಣ ಸಮಾಜಮುಖಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿಗಳು, ಸಹಯೋಗ ಸಂಸ್ಥೆಗಳು, ಸಮಿತಿಯ ಪದಾಧಿಕಾರಿಗಳು, ಸ್ವಯಂಸೇವಕರು ಹಾಗೂ ಶಿಬಿರದಲ್ಲಿ ಭಾಗವಹಿಸಿದ ಸಮಸ್ತ ಸಮಾಜ ಬಾಂಧವರಿಗೆ ಕೌಂಡಿಣ್ಯ ಗೋತ್ರ ನಾಯಕ್ ಕುಲಪುರುಷ ಸಮಿತಿ (ರಿ.) ಉಡುಪಿ  ಜಿಲ್ಲಾ ಸಮಿತಿ  ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.

“ಆರೋಗ್ಯವಂತ ಸಮಾಜವೇ ಸದೃಢ ಸಮಾಜ; ಸೇವೆಯೇ ಸಮಾಜದ ನಿಜವಾದ ಶಕ್ತಿ.”