ಸುಳ್ಯ ರಿಪಾರ್ಟಿಯರ್ಸ್ ವೆಲ್ಫೇರ್ ಟ್ರಸ್ಟ್‌ನಿಂದ ದಿವ್ಯಾಂಗ ಚೇತನ ಸುಬ್ರಹ್ಮಣ್ಯ ಅವರಿಗೆ ವೀಲ್‌ಚೇರ್ ವಿತರಣೆ

0
17

ಸುಳ್ಯ: ಸುಳ್ಯ ರಿಪಾರ್ಟಿಯರ್ಸ್ ವೆಲ್ಫೇರ್ ಟ್ರಸ್ಟ್ (ರಿ.) ಕಳೆದ ಹಲವು ವರ್ಷಗಳಿಂದ ಸಮುದಾಯದಲ್ಲಿ ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಹಾಗೂ ಅಸಹಾಯಕರಿಗೆ ನೆರವಾಗುವ ಕೆಲಸಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.

ಇದೀಗ ಟ್ರಸ್ಟ್ ವತಿಯಿಂದ ಮತ್ತೊಂದು ಅರ್ಥಪೂರ್ಣ ಸೇವಾ ಕಾರ್ಯ ನಡೆದಿದ್ದು, ಕಡಬ ತಾಲೂಕಿನ ಐತೂರು ಗ್ರಾಮದ ಕಲ್ಲಾಜೆ ಕಾಲೋನಿ ನಿವಾಸಿಗಳಾದ ಶ್ರೀಯುತ ನಟರಾಜ್ ಹಾಗೂ ಸೆಂದಮಿಳ್ ಸೆಲ್ವಿ ಅವರ ಮೊಮ್ಮಗ, ಆನಂದರಾಜ್ ಮತ್ತು ಹೇಮಲತಾ ದಂಪತಿಯ ಪುತ್ರರಾದ ಸುಬ್ರಹ್ಮಣ್ಯ ಅವರ ಅಂಗವಿಕಲತೆಯನ್ನು ಸ್ಪಂದಿಸಿ, ಅವರಿಗೆ ಉಚಿತವಾಗಿ ಚಕ್ರದ ಕುರ್ಚಿ (Wheelchair) ಯನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀರಾಮ್ ಫ್ಯಾಬ್ರಿಕೇಶನ್ ಮಾಲಕರು ಹಾಗೂ ಕಲ್ಲಾಜೆ ಶ್ರೀರಾಮ ದೇವಸ್ಥಾನದ ಅಧ್ಯಕ್ಷರಾದ ರಾಮ್ ಮಂಗಳೂರು, ಸುಳ್ಯ ರಿಕೊ ಸೊಸೈಟಿಯ ಅಧ್ಯಕ್ಷರು ಹಾಗೂ ರಿಪಾರ್ಟಿಯರ್ಸ್ ಟ್ರಸ್ಟ್‌ನ ಸದಸ್ಯರಾದ ಶಿವಕುಮಾರ್ ಮಂಗಳೂರು, ಕಡಬ ತಮಿಳು ಸೇವಾ ಸಂಘದ ಗೌರವಾಧ್ಯಕ್ಷರಾದ ಶಿವರಸನ್ ಕೆರ್ಮಾಯಿ, ರಾಜಕೃಷ್ಣನ್ ಬಿಳಿನೆಲೆ, 72 ಕಾಲೋನಿಯ ಕೃಷ್ಣಮೂರ್ತಿ ಹಾಗೂ ಬಿತ್ತೋಡಿ ಕಾಲೋನಿಯ ಶಿವರಾಜ್ ಸೇರಿದಂತೆ ಊರಿನ ಗ್ರಾಮಸ್ಥರು ಮತ್ತು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಈ ಮಾನವೀಯ ಹಾಗೂ ಸೇವಾ ಕಾರ್ಯಕ್ಕೆ ಸಹಕಾರ ನೀಡಿದ ಗಣ್ಯರು, ಸಂಘಟಕರು, ಗ್ರಾಮಸ್ಥರು ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಟ್ರಸ್ಟ್ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು.

  • ವರದಿ : ಸುರೇಶ್ ಕುಮಾರ್ ಜಿ ಚಾರ್ವಾಕ ಪಾಲ್ತಿಲ