ಸುರತ್ಕಲ್ : ಸುರತ್ಕಲ್ನ ಹಿಂದೂ ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಗೋವಿಂದದಾಸ ಕಾಲೇಜು ಹಾಗೂ ವಿದ್ಯಾದಾಯಿನೀ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ವಿದ್ಯಾರ್ಥಿವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಡಿಪ್ಲೊಮಾ, ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ವಿವಿಧ ದತ್ತಿನಿಧಿಗಳ ಮೂಲಕ ವಿದ್ಯಾರ್ಥಿವೇತನ ವಿತರಿಸಲಾಗುವುದು.
ದಿ. ಮೈರ್ಪಾಡಿ ವೆಂಕಟರಮಣಯ್ಯ ವಿದ್ಯಾರ್ಥಿವೇತನ, ದಿ. ಚಂದೂ ಬಾಯಿ ಪಡುಮನೆ ಕುಳಾಯಿ ವಿದ್ಯಾರ್ಥಿವೇತನ, ಕೆ. ಸತ್ಯನಾರಾಯಣ ವಿದ್ಯಾರ್ಥಿವೇತನ, ಮೋಹಿನಿ ಮತ್ತು ಕೆ. ರಾಮ ರಾವ್ ವಿದ್ಯಾರ್ಥಿವೇತನ, ರಮಾ ವೆಂಕಟ್ರಾವ್ ಕುಳಾಯಿ ವಿದ್ಯಾರ್ಥಿವೇತನ, ರಂಗನಾಯಕಿ ಮತ್ತು ಐ. ವಾಸುದೇವ ರಾವ್ ವಿದ್ಯಾರ್ಥಿವೇತನ, ದಿವಂಗತ ನಾಗರಾಜ ಐ. ಸಂಸ್ಮರಣಾರ್ಥ ವಿದ್ಯಾರ್ಥಿವೇತನ, ವಿ.ಎನ್. ಶ್ರೀನಿವಾಸ ರಾವ್ ವಿದ್ಯಾರ್ಥಿವೇತನ ಹಾಗೂ ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ವಿದ್ಯಾರ್ಥಿವೇತನ ನಿಧಿಯ ಮೂಲಕ ಸಹಾಯಧನ ನೀಡಲಾಗುವುದು.
ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ನವೆಂಬರ್ 29, 2026ರ ಭಾನುವಾರದಂದು ಸುರತ್ಕಲ್ನ ವಿದ್ಯಾದಾಯಿನೀ ಪ್ರೌಢಶಾಲೆಯ ವಜ್ರ ಮಹೋತ್ಸವ ಸಭಾಂಗಣದಲ್ಲಿ ನಡೆಯಲಿದೆ.
ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳು ಅರ್ಜಿ ನಮೂನೆಗಳನ್ನು ಇಡ್ಯಾ, ಸುರತ್ಕಲ್ನ ವಿದ್ಯಾದಾಯಿನೀ ಪ್ರೌಢಶಾಲೆಯ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ನವೆಂಬರ್ 15, 2026ರ ಭಾನುವಾರದೊಳಗೆ ಸಲ್ಲಿಸಬೇಕು ಎಂದು ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಪ್ರಕಟಣೆ ತಿಳಿಸಿದೆ.
