ಬೆಂಗಳೂರು : ದಿವಂಗತ ಕೃಷ್ಣಮೂರ್ತಿ ಎಂ ಸಂಸ್ಕಾರಣ ವೇದಿಕೆ : ಹೃದಯವಾಹಿನಿ ಸಂಸ್ಥೆ ಆಯೋಜಿಸಿದ್ದ ಅನಿವಾಸಿ ಕನ್ನಡಿಗರ ಮೂರನೇ ಸಮ್ಮೇಳನ ಹಾಗೂ ಹೊರನಾಡು ಕನ್ನಡಿಗರ ಸಮ್ಮೇಳನ ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅದ್ಧೂರಿಯಾಗಿ ಜರುಗಿತು.

ಗೋಲ್ಡನ್ ಕಪಲ್ ಅವಾರ್ಡ್, ನವ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಸೇರಿದಂತೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿದೇಶದ ಗಣ್ಯರು , ಉದ್ಯಮಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಶೇಷ ಆಮಂತ್ರಿತರಾದ ಅಬುದಾಬಿ ಕನ್ನಡಸಂಘದ ಅಧ್ಯಕ್ಷರು ಡಾ.ಸರ್ವೋತ್ತಮ ಶೆಟ್ಟಿ ಅವರು ಮಾತನಾಡಿ ವಿದೇಶದಲ್ಲಿರುವ ಕನ್ನಡಿಗರು ನಾಡು ನುಡಿಗೆ ಸಲ್ಲಿಸುತ್ತಿರುವ ಸೇವೆ ನಿಸ್ವಾರ್ಥವಾದದು ಕರ್ನಾಟಕ ಸರಕಾರ ಅನಿವಾಸಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ನೀಡಬೇಕು ಎಂದರು ಕರ್ನಾಟಕ ಅನಿವಾಸಿ ಕನ್ನಡಿಗರ ಕೋಶದ ಮಾಜಿ ಉಪಾಧ್ಯಕ್ಷರಾದ ಡಾ.ಆರತಿಕೃಷ್ಣ ಎಂಎಲ್ ಸಿ, ಮಾಜಿ ಸಭಾಧ್ಯಕ್ಷರು ಕರ್ನಾಟಕ ವಿಧಾನಪರಿಷತ್ ಬಸವರಾಜ ಹೊರಟ್ಟಿ, ಬಹರೇನ್ ಕನ್ನಡ ಸಂಘದ ಅಧ್ಯಕ್ಷರಾದ ಅಜಿತ್ ಬಂಗೇರ ಅವರು ಸಂಘದ ಸಾಧನೆಗಳ ಕುರಿತ ಕಿರಿ ಚಿತ್ರವನ್ನು ಪ್ರದರ್ಶಿಸಿದರು.
ಸಿಂಗಾಪುರ ಕನ್ನಡ ಸಂಘದ ಮಾಜಿ ಅಧ್ಯಕ್ಷರು ವಿಟಿ ಶ್ರೀನಿವಾಸ್ , ಇಸ್ರೇಲ್ ನ ಉದ್ಯಮಿ ದಿನಕರ್ ಪುತ್ರನ್ , ಅಮೆರಿಕದ ಅನಿವಾಸಿ ಶ್ರೀಮತಿ ಲಕ್ಷ್ಮಿ ದಿವಂಗತ ಕೃಷ್ಣಮೂರ್ತಿ ಮುನಿಯಪ್ಪಯವರ ಪತ್ನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಕಿರಣ್ ಸಿಂಗ್, ಹಾಡುಗಾರರಾದ ಕಿಕ್ಕೇರಿ ಕೃಷ್ಞಮೂರ್ತಿ, ಭಾಗಿಯಾಗಿದ್ದರು.
ಹೃದಯವಾಹಿನಿ ಮಂಗಳೂರು ಸ್ಥಾಪಕ ಅಧ್ಯಕ್ಷರು- ಸಂಪಾದಕರಾದ ಕೆಪಿ ಮಂಜುನಾಥ್ ಸಾಗರ್ ಅವರು ಮಾತನಾಡಿ, 3 ವರ್ಷದ ಹಿಂದೆ ಸಮ್ಮೇಳನ ನಡೆಸುವ ಈ ಪರಿಕಲ್ಪನೆ ಬಂದಿತು. ಊರಿಗೆ ಬಂದು ಹೋಗುವ ಸಂದರ್ಭದಲ್ಲಿ ಅನಿವಾಸಿ ಭಾರತೀಯರಿಗೆ ಗೌರವ ಪ್ರೀತಿ ಕೊಡಲು, 2024 ರಲ್ಲಿ ಆರಂಭವಾಗಿ ಪ್ರಥಮ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಈ ಬಾರಿ ಮಹಿಳಾ ಸಾಧಕಿ ಡಾ.ಸುಮಾ ಗೌಡ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಲಾಗಿದೆ. ವಿದೇಶಗಳಲ್ಲಿ ಈವರೆಗೆ 77 ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, 17 ವಿಶ್ವಕನ್ನಡ ಸಮ್ಮೇಳನ ನಡೆಸಲಾಗಿದೆ ಸಮ್ಮೇಳನಾಧ್ಯಕ್ಷರಾದ ಖ್ಯಾತ ಸಂಖ್ಯಾಶಾಸ್ತ್ರಜ್ಞರು ಹಾಗೂ ಬಾ ಕತಾರಿನ ಭಾರತ ರಾಯಭಾರ ಕಚೇರಿ ಅಡಿಯ ಸಾಂಸ್ಕೃತಿಕ ಕೇಂದ್ರದ ಮಾಜಿ ಕಾರ್ಯದರ್ಶಿ ಸುಮಾ ಮಹೇಶ್ ಗೌಡ -ಕತಾರ್, ಅನಿವಾಸಿ ಕನ್ನಡಿಗರು ಹಾಗೂ ಹೊರನಾಡ ಕನ್ನಡಿಗರು ಸಮ್ಮೇಳನದ ಪ್ರಥಮ ಮಹಿಳಾ ಸಮ್ಮೇಳಾಧ್ಯಕ್ಷರಾಗಿ ಆಯ್ಕೆಯಾಗಿರುವರು ಎಂದರು.
ಎಂಎಲ್ ಸಿ ಬಸವರಾಜ್ ಹೊರಟ್ಟಿಯವರು ಮಾತನಾಡಿ, ಅನಿವಾಸಿ ಭಾರತೀಯರ ಮಹತ್ವವಾದ ಕಾರ್ಯಕ್ರಮ ಇದು. ಕರ್ನಾಟಕಕ್ಕಿಂತ ಉತ್ತಮವಾದ ಕಾರ್ಯಕ್ರಮವನ್ನು ವಿದೇಶದಲ್ಲಿ ಮಾಡುತ್ತಾರೆ. ಎಲ್ಲಾ ಭಾರತೀಯರು, ಕರ್ನಾಟಕದವರು ಸೇರಿ ಉತ್ತಮವಾಗಿ ನಡೆಸುತ್ತಾರೆ. ಕಟ್ಟಡ ನಿರ್ಮಾಣಕ್ಕಾಗಿ 1 ಕೋಟಿ ರೂ ಹಣ ಮಂಜೂರು ಮಾಡಿಸುತ್ತಿದ್ದೇನೆ ಎಂದರು. ಅನಿವಾಸಿ ಭಾರತೀಯರು ಹೊರದೇಶಗಳಲ್ಲಿದ್ದು ಕನ್ನಡ ಬೆಳೆಸುತ್ತಿರುವುದರಿಂದ ಅವರಿಗೆ ಬೇಕಾದ ಅಗತ್ಯ ನೆರವನ್ನು ಕರ್ನಾಟಕ ಸರಕಾರ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ.
ಸುಮಾ ಮಹೇಶ್ ಗೌಡ ಅವರು ಮಾತನಾಡಿ, ಕತಾರ್ ನಲ್ಲಿ 2008 ರಲ್ಲಿ ಕನ್ನಡ ಸಮ್ಮೇಳನ ಯಶಸ್ವಿಯಾಗಿ ನಡೆದಿತ್ತು. ಇದರಲ್ಲಿ ಮಂಜುನಾಥ್ ಸಾಗರ್ ಅವರ ಪಾತ್ರ ಬಹಳ ದೊಡ್ಡದಿತ್ತು. ಅನಿವಾಸಿ ಕನ್ನಡಿಗರ ಸಮ್ಮೇಳನ ಇನ್ನೂ ಹೆಚ್ಚಾಗಿ ನಡೆಯಬೇಕು. ವ್ಯಾಪಾರ, ಹೂಡಿಕೆ , ಕಲೆ, ರಫ್ತು ಉತ್ತೇಜಿಸಲು ವಿಶ್ವದಾದ್ಯಂತ ಇರುವ ಕನ್ನಡಿಗರಿಗಾಗಿ ಕರ್ನಾಟಕ ಸರಕಾರವು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕನ್ನಡವು ಎಲ್ಲರು ಮಾತನಾಡುವ ಭಾಷೆಯಾಗಬೇಕು. ಕತಾರ್ ನ ಸಿಬಿಎಸ್ ಸಿ ಶಾಲೆಗಳಲ್ಲಿ ಕನ್ನಡ ಭಾಷೆಯ ಪರಿಚಯ ಮಾಡಲಾಗಿದೆ. ಇದೇ ರೀತಿ ಕನ್ನಡದ ಬಳಕೆ ಹೆಚ್ಚು ಮಾಡಬೇಕು ಎಂದು ಆಶಿಸಿದರು.
ಕನ್ನಡ ಭಾಷೆ, ಸಮಾಜಕ್ಕೆ ಕೊಡುಗೆ ನೀಡಿದ ಪತಿ-ಪತ್ನಿಯರಿಗೆ ಗೋಲ್ಡನ್ ಕಪಲ್ ಅವಾರ್ಡ್ ಕೊಡಲಾಯಿತು. ಅಲ್ಲದೆ ಸಾಧಕರಿಗೆ ನವ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದಕ್ಷಿಣ ಕನ್ನಡ ಮೂಲದ , ಇಸ್ರೇಲ್ ನಲ್ಲಿರುವ ಉದ್ಯಮಿ, ದಿನಕರ್ ಪುತ್ರನ್ ಹಾಗೂ ಗಿರೀಶ್ ಪೂಜಾರಿ ದಂಪತಿ ಸೇರಿದಂತೆ ಹಲವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

