
ದಾವಣಗೆರೆ : ದಾವಣಗೆರೆಯ ಎಸ್.ಎಸ್.ಮ್ಯೂಸಿಕ್ ಸ್ಟುಡಿಯೋದ ಆಶ್ರಯದಲ್ಲಿ ಅ. 17, 18 ಶನಿವಾರ, ಭಾನುವಾರ ಎರಡು ದಿನಗಳ ಕಾಲ ದಾವಣಗೆರೆಯ ವಿದ್ಯಾನಗರ ರಸ್ತೆಯಲ್ಲಿ ಇರುವ ಕುವೆಂಪು ಕನ್ನಡ ಭವನದಲ್ಲಿ Áಜ್ಯ ಮಟ್ಟದ ಕನ್ನಡ ಕರೋಕೆ ಗಾಯನ ಸ್ಪರ್ಧೆಗೆ ಅಹ್ವಾನಿಸಲಾಗಿದೆ ಎಮದು ಸಂಸ್ಥೆಯ ಸಂಸ್ಥಾಪಕರಾದ ತಿಪ್ಪೇಸ್ವಾಮಿ ಎನ್.ಆರ್. ತಿಳಿಸಿದ್ದಾರೆ.
ಪ್ರತಿಭಾವಂತ ಹಿರಿಯ, ಕಿರಿಯ ಗಾಯಕ, ಗಾಯಕಿಯರಿಗೆ ಒಂದೊಳ್ಳೆಯ ವೇದಿಕೆ ಕಲ್ಪಿಸುವ ಸದುದ್ದೇಶದಿಂದ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಹಿರಿಯರಿಗೆ, ಕಿರಿಯರಿಗೆ, ಗಾಯಕರಿಗೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ, ಸ್ಮರಣಿಕೆ ಕೊಟ್ಟು ಗೌರವಿಸುತ್ತೇವೆ.
ಹೆಚ್ಚಿನ ಮಾಹಿತಿಗೆ 7338507330, 9986944479, 7676638244 ಈ ಸನೀಹ ವಾಣಿಗಳಿಗೆ ಸಂಪರ್ಕಿಸಿ ಹೆಸರು ನೊಂದಾಯಿಸಬೇಕಾಗಿ ಸಂಸ್ಥೆಯ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ
