ರೇಡಿಯೊ ಮಣಿಪಾಲದಲ್ಲಿ ‘ಸಂಗೀತ ಪಾಠ’ ಸರಣಿ ಕಾರ್ಯಕ್ರಮದ 161 ನೇ ಸಂಚಿಕೆಯ ಪ್ರಸಾರ

0
13

ಮಣಿಪಾಲ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ಸಮುದಾಯ ಬಾನುಲಿ ರೇಡಿಯೊ ಮಣಿಪಾಲ್ 90.4 ಮೆಘಾಹರ್ಟ್ಸ್ ನಲ್ಲಿ ‘ಸಂಗೀತ ಪಾಠ’ ಕಾರ್ಯಕ್ರಮದ 161 ನೇ ಸಂಚಿಕೆ ಅಕ್ಟೋಬರ್ ತಿಂಗಳ ದಿನಾಂಕ 16ರಂದು ಶುಕ್ರವಾರ ಸಂಜೆ 5.30ರ ಸಮಯಕ್ಕೆ ಪ್ರಸಾರವಾಗಲಿದೆ. ಸಂಗೀತ ಶಿಕ್ಷಕರಾದ ಸ್ವಪ್ನಾ ರಾಜ್ ಚಿಟ್ಪಾಡಿ ಮತ್ತು ಸ್ವರಾಂಜಲಿ ಮ್ಯೂಸಿಕ್ ಅಕೇಡಮಿ (ರಿ ) ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಅಕ್ಟೋಬರ್ 17 ರಂದು ಶನಿವಾರ 1.30ಕ್ಕೆ ಮರು ಪ್ರಸಾರವಾಗಲಿರುವುದು.
ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿ ಈ ಕಾರ್ಯಕ್ರಮವನ್ನು ಕೇಳಬಹುದಾಗಿದೆ ಎಂದು ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರ ದ ಪ್ರಕಟಣೆ ತಿಳಿಸಿದೆ.