ಗುಂಡ್ಯಡ್ಕ ಸಿಡಿಲು ಬಡಿದು ಮನೆಗೆ ಹಾನಿ

0
67

ಮೂಡುಬಿದಿರೆ : ಪುತ್ತಿಗೆ ಗ್ರಾಮದ ಗುಂಡ್ಯಡ್ಕ ಶ್ರೀನಿವಾಸಪುರದ ವಿಠೋಭ ಭಜನಾ ಮಂದಿರದ ಬಳಿಯ ನಿವಾಸಿ ಶೇಖರ ಪೂಜಾರಿ ಅವರ ಮನೆಗೆ ಶುಕ್ರವಾರ ರಾತ್ರಿ ಸಿಡಿಲು ಬಡಿದು ಹಾನಿಯಾಗಿದೆ.

ಸಿಡಿಲಿನ ಪರಿಣಾಮವಾಗಿ ಮನೆಯ ವಿದ್ಯುತ್ ಉಪಕರಣಗಳು, ವಿದ್ಯುತ್ ಮೀಟರ್ ಹಾಗೂ ವಿದ್ಯುತ್ ತಂತಿಗಳು ಸಂಪೂರ್ಣ ಹಾನಿಗೊಳಗಾಗಿವೆ. ಮನೆಯ ಟಿ.ವಿ.ಗೂ ಹಾನಿಯಾಗಿದ್ದು, ಮನೆಯ ಗೋಡೆಯೂ ಹಾನಿಗೊಂಡು ಹುಡಿಯಾಗಿ ಕೆಳಗೆ ಬಿದ್ದಿದೆ. ಘಟನೆಯಿಂದ ಮನೆಯವರಿಗೆ ನಷ್ಟ ಉಂಟಾಗಿದೆ.

ಘಟನಾ ಸ್ಥಳಕ್ಕೆ ಅಕ್ರಮ-ಸಕ್ರಮ ಸಮಿತಿಯ ಸದಸ್ಯ ವಾಸುದೇವ ನಾಯ್ಕ್ ಹಾಗೂ ಪುತ್ತಿಗೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಶಶಿಧರ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.