ಅ. 17 ರಂದು ಮೈಸೂರಿನಲ್ಲಿ ದಾವಣಗೆರೆಯ ಭರತಾಂಜಲಿ ಆಕಾಡಮಿಯಿಂದ ಭರತನಾಟ್ಯ ಪ್ರದರ್ಶನ

0
10

ದಾವಣಗೆರೆ : ದಾವಣಗೆರೆಯ ಭರತಾಂಜಲಿ ಆಕಾಡಮಿಯಿಂದ ಶರನ್ನವರಾತ್ರಿ ಮಹೋತ್ಸವದ ಪರವಾಗಿ ಅಕ್ಟೋಬರ್ 17 ರಂದು ಶನಿವಾರ ಸಂಜೆ 5 ಗಂಟೆಗೆ ಮೈಸೂರಿನ ರಮಾಗೋವಿಂದ ರಂಗ ಮಂದಿರದಲ್ಲಿ ಭರತನಾಟ್ಯ ವಿದ್ಯಾರ್ಥಿಗಳಿಂದ ಸಾಮೂಹಿಕ ಭರತನಾಟ್ಯ ನೃತ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಭರತನಾಟ್ಯ ಶಿಕ್ಷಕಿ, ನಿರ್ದೇಶಕರಾದ ವಿದುಷಿ ಡಾ. ಬಿ.ಮಂಗಳಾ ಶೇಖರ್ ತಿಳಿಸಿದ್ದಾರೆ.

ಈ ಸಾಂಸ್ಕೃತಿಕ ವಿಜೃಂಭಣೆಯ ಭರತನಾಟ್ಯ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಭರತಾಂಜಲಿ ಆಕಾಡಮಿಯ ಸಂಸ್ಥಾಪಕರಾದ ರಾಜಶೇಖರ್ ಬೆನ್ನೂರು ಪ್ರಕಟಿಸಿದ್ದಾರೆ.