ಭಾಗವತ ರವಿಚಂದ್ರ ಕನ್ನಡಿಕಟ್ಟೆಯವರಿಗೆ ಬಲಿಪ ಪ್ರಸಾದ ಪ್ರಶಸ್ತಿ ಸನ್ಮಾನ

0
13

ಮೂಡುಬಿದಿರೆ : ಬಲಿಪ ಪ್ರಸಾದ ಭಾಗವತ 50ರ ನೆನಪು ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್ ಸರಣಿಯ 15ನೇ ಕಾರ್ಯಕ್ರಮವು ಇಲ್ಲಿನ ಮೂಡುಬಿದಿರೆ ಪೊನ್ನೆಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಪೊನ್ನೆಚಾರಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ವೇದಿಕೆಯಲ್ಲಿ ಜರಗಿತು. ಈ ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಅಗ್ರಪಂಕ್ತಿಯ ಭಾಗವತರಾದ ಹನುಮಗಿರಿ ಮೇಳದ ಪ್ರಧಾನ ಭಾಗವತ ಶ್ರೀ ರವಿಚಂದ್ರ ಕನ್ನಡಿಕಟ್ಟೆಯವರಿಗೆ ಸರಣಿಯ 15ನೇ ಸನ್ಮಾನವನ್ನು ನೀಡಿ ಗೌರವಿಸಲಾಯಿತು.

ಯಕ್ಷಗಾನ ಸಂಘಟಕ, ವಿಮರ್ಶಕ ಶಾಂತಾರಾಮ ಕುಡ್ವ ರವರು ಪ್ರಸಾದ ಭಾಗವತರ ಸ್ಮರಣೆ ಮತ್ತು ಸನ್ಮಾನಿತ ರವಿಚಂದ್ರ ಕನ್ನಡಿಕಟ್ಟೆಯವರ ಬಗ್ಗೆ ಅಭಿನಂದನಾ ಭಾಷಣ ಮಾಡಿದರು.

ಸನ್ಮಾನ ಸ್ವೀಕರಿಸಿದ ಶ್ರೀ ರವಿಚಂದ್ರ ಕನ್ನಡಿಕಟ್ಟೆಯವರು ಯಕ್ಷಗಾನ ರಂಗದಲ್ಲಿ ತಾನು ನಡೆದ ಬಂದ ದಾರಿ ಮತ್ತು ಈ ಮಟ್ಟಿಗೆ ತನ್ನನ್ನು ಗುರುತಿಸಿ ಬೆಳೆಸುವಲ್ಲಿ ಪ್ರಧಾನ ಕಾರಣಕರ್ತರಾದ ಗುರುಗಳಾದ ಅನಂತ ಪದ್ಮನಾಭ ಹೊಳ್ಳ ಮತ್ತು ಭಾಗವತ ಪದ್ಯಾಣ ಗಣಪತಿ ಭಟ್ ಹಾಗೂ ತನ್ನನ್ನು ಮೆರೆಸುವಲ್ಲಿ ಕಾರಣಕರ್ತರಾಗಿರುವ ಯಕ್ಷ ಕಲಾವಿದರನ್ನು, ಪ್ರೇಕ್ಷಕವರ್ಗವನ್ನು ಕೂಡ ಅವರು ಸ್ಮರಿಸಿ ಗುಣಗಾನ ಮಾಡಿ ಅಭಿವಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಯಕ್ಷಗಾನ ಪೋಷಕ ಉದ್ಯಮಿ ಕೆ. ಶ್ರೀಪತಿ ಭಟ್ ಪೊನ್ನೆಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಶ್ರೀ ಎಂ.ಪಿ. ಅಶೋಕ್ ಕಾಮತ್, ಯಕ್ಷಗಾನ ಸಂಘಟಕ ಎಂ ಶಾಂತರಾಮ ಕುಡ್ವ,ನಿವೃತ್ತ ಮುಖ್ಯೋಪಾಧ್ಯಯ ಅನಂತ ಪದ್ಮನಾಭ ಹೊಳ್ಳ, ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಡಾ. ರಾಮಕೃಷ್ಣ ಶಿರೂರು,ಲಾಡಿ ರವಿಪ್ರಸಾದ ಶೆಟ್ಟಿ, ಸನ್ಮಾನ ಸಮಿತಿಯ ಅಧ್ಯಕ್ಷ ರುಕ್ಕಯ್ಯ ಪೂಜಾರಿ,ಅಲ್ವಿನ್ ಮಿನೇಜಸ್ ಕಲ್ಲಬೆಟ್ಟು ವಾಸ್ತು ತಜ್ಞ ಎಂ ರಾಘವೇಂದ್ರ ಭಂಡಾರ್ಕಾರ್ ಮೂಡುಬಿದಿರೆ, ಸಮಾಜ ಸೇವಕ ವಿಶ್ವನಾಥ್ ನಾಯಕ್ ಕಲ್ಲಬೆಟ್ಟು,ಪತ್ರಕರ್ತೆ ಪ್ರೇಮಾ ಶ್ರೀ ಕಲ್ಲಬೆಟ್ಟು ಉಪಸ್ಥಿತರಿದ್ದರು.

ಸನ್ಮಾನ ಸಮಿತಿಯ ಸಂಘಟಕರಾದ ಹಿರಿಯ ಪತ್ರಕರ್ತ ಕೃಷ್ಣ ಕುಮಾರ್ ಪ್ರಾರಂಭದಲ್ಲಿ ಪ್ರಸ್ಥಾಪಿಸಿ ಸ್ವಾಗತಿಸಿದರು.ಶ್ರೀಮತಿ ನಾಗರತ್ನ ಶಿರೂರು ಕಾರ್ಯಕ್ರಮ ನಿರ್ವಹಿಸಿದರು. ಡಾ ರಾಮಕೃಷ್ಣ ಶಿರೂರು ವಂದಿಸಿದರು.