
ಉಡುಪಿ : ಉಡುಪಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಪ್ರಥಮ ಮೀಟ್ ಮಣಿಪಾಲ್ ವ್ಯಾಲಿಯು ಕಂಟ್ರಿ ಕ್ಲಬ್ ನಲ್ಲಿ ಜರಗಿತು (UCCI) ವತಿಯಿಂದ ನೂತನ ನಾಯಕತ್ವದ ಅಡಿಯಲ್ಲಿ ನಡೆದ ಪ್ರಥಮ ಸದಸ್ಯರ ಸಭೆಯಲ್ಲಿ ಚೇಂಬರ್ನ ಮಾಸಿಕ ಮ್ಯಾಗಜಿನ್ ಪತ್ರಿಕೆಯನ್ನು ಚೇಂಬರ್ನ ಪೂರ್ವಾಧ್ಯಕ್ಷರಾದ ಶ್ರೀ ಅಮ್ಮುಂಜೆ ಪ್ರಭಾಕರ ನಾಯಕ್ ಮಾಸ ಪತ್ರಿಕೆ ( ಮ್ಯಾಗಜಿನ್ ) ಬಿಡುಗಡೆಗೊಳಿಸಿ ಮಾತನಾಡಿ ಸದಸ್ಯರ ನಡುವಿನ ಒಗ್ಗಟ್ಟು, ಪರಸ್ಪರ ಸಹಕಾರ ಹಾಗೂ ಚೇಂಬರ್ನ ಮೂಲಕ ವ್ಯಾಪಾರಾವಕಾಶಗಳನ್ನು ಉತ್ತೇಜಿಸುವ ಕುರಿತು ವಿಚಾರ ವಿನಿಮಯ ನೆಡೆಸಿದರು .
ವೇದಿಕೆಯಲ್ಲಿ ಯುಸಿಸಿಐ ಅಧ್ಯಕ್ಷರಾದ ನಟರಾಜ್ ಪ್ರಭು, ಉಪಾಧ್ಯಕ್ಷರಾದ ಡಾ. ವಿಜಯೇಂದ್ರ ರಾವ್, ಗೌರವ ಕಾರ್ಯದರ್ಶಿಗಳಾದ ಮೊಹಮ್ಮದ್ ಸಮೀರ್, ಖಜಾಂಚಿಗಳಾದ ಶ್ರೀ ಕೆ. ವಿನೋದ್ ಪೈ ಹಾಗೂ ಮ್ಯಾಗಜಿನ್ ಸಂಪಾದಕರಾದ ಡಾ. ವಿಲಾಸ್ ಪೈ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಂಟಿ ಕಾರ್ಯದರ್ಶಿಗಳಾದ ಅವಿನಾಶ್ ಪೂಜಾರಿ ಮತ್ತು ಅನೀಶ್ ಪೈ ಅವರು ನಿರ್ವಹಿಸಿದರು. ಯುಸಿಸಿಐ ನಿರ್ದೇಶಕರಾದ ನಾಗರಾಜ್ ಹೆಬ್ಬಾರ್, ಅತುಲ್ ಭಕ್ತ, ವಾಲ್ಟರ್ ಸಲ್ದಾನ್ಹಾ, ಶ್ರೀಪತಿ ಭಟ್ ಹಾಗೂ ಸಂತೋಷ್ ಶೆಟ್ಟಿ ಸಹಕರಿಸಿದರು, ಸಂಸ್ಥೆಯ ಪದಾಧಿಕಾರಿಗಳು ನೂರಾರು ಸದಸ್ಯರು ಉಪಸ್ಥಿತರಿದ್ದರು.
