ಬಿ.ಜೆ.ಎಂ ಮಲ್ಲಾರು-ಮಜೂರು ಅಧ್ಯಕ್ಷರಾದ ಡಾ.ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ಇನಾಯತ್ ಆಲಿಯವರಿಗೆ ಅಭಿನಂದನೆ

0
11

ಮಲ್ಲಾರು : ಮಜೂರು ಬದ್ರಿಯ ಜುಮ್ಮಾ ಮಸ್ಜಿದ್ (ರಿ)ವತಿಯಿಂದ ಮಸ್ಜಿದ್ ಅಧ್ಯಕ್ಷರಾದ ಡಾ.ಫಾರೂಕ್ ಚಂದ್ರನಗರ ಇವರ ನೇತೃತ್ವದಲ್ಲಿ ಕೆ.ಪಿ.ಸಿ.ಸಿ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಮಂಗಳೂರು ಜಿಲ್ಲೆ ಬಜ್ಪೆಯಲ್ಲಿ ಹಜ್ ಭವನ ಮಾಡಲು ಸುಮಾರು 2 ಎಕ್ರೆ ಜಾಗವನ್ನು ಉಚಿತವಾಗಿ ನೀಡಿ ಮುಸ್ಲಿಂ ಸಮುದಾಯಕ್ಕೆ ಮಾಡಿದ ದೊಡ್ಡ ಕೊಡುಗೆ ಎಂದು ಸ್ಲಾಗಿಸಿ ಅವರನ್ನು ಅಭಿನಂದಿಸಿ ಮುಂದೆಯೂ ತಮ್ಮಿಂದ ಮತ್ತಷ್ಟು ಸಹಕಾರ ಸಮುದಾಯ ಹಾಗೂ ಸಮಾಜಕ್ಕೆ ಸಿಗಲಿ ಎಂದು ಡಾ.ಫಾರೂಕ್ ರವರು ತಿಳಿಸಿದರು.

ಈ ಸಂದರ್ಭದಲ್ಲಿ ಮಲ್ಲಾರು-ಮಜೂರು ಬಿ.ಜೆ.ಎಂ ಮಸ್ಜಿದ್ ಅಭಿವೃದ್ಧಿ ಕೆಲಸ ಮುಂದುವರೆದಿದ್ದು ಸಹಕಾರಕ್ಕಾಗಿ ಮನವಿ ಮಾಡಲಾಯಿತು .ಮಸ್ಜಿದ್ ಖತೀಬರಾದ ಅಬ್ದುಲ್ ರಶೀದ್ ಸಖಾಫಿ ಅಲ್ -ಖಾಮಿಲ್, ಸಾಹಿತಿ ಹಾಗೂ ಬಿ.ಜೆ.ಎಂ ಕಾರ್ಯದರ್ಶಿ ಅಶ್ರಫ್ ಕರಂದಾಡಿ, ರಝಕ್ ಮಲ್ಲಾರು ,ಶಂಶುದ್ದಿನ್ ಕರಂದಾಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.