ಮೂಡುಬಿದಿರೆ ಆಲಂಗಾರಿನಲ್ಲಿ ಶರತ್ ಮೆಡಿಕಲ್ಸ್ ಉದ್ಘಾಟನೆ

0
1

-ಮಂದಾರ ರಾಜೇಶ್ ಭಟ್

​ಮೂಡುಬಿದಿರೆಯ ಆಲಂಗಾರಿನ ಪ್ರಸಿದ್ಧ ಅಕೋ ಕ್ರಿಸ್ಟಲ್ ವಾಣಿಜ್ಯ ಹಾಗೂ ವಸತಿ ಸಂಕೀರ್ಣದ ನೆಲಮಹಡಿಯಲ್ಲಿ, 21 ವರ್ಷಗಳ ಔಷಧ ಸೇವಾ ಅನುಭವ ಹೊಂದಿರುವ ಶರತ್ ಕೋಟ್ಯಾನ್ ಅವರ ಮಾಲೀಕತ್ವದ ‘ಶರತ್ ಮೆಡಿಕಲ್ಸ್’ ನೂತನ ಔಷಧ ಮಳಿಗೆಯು ಅಧಿಕೃತವಾಗಿ ಆರಂಭಗೊಂಡಿದೆ.

​ಉದ್ಘಾಟನಾ ಸಮಾರಂಭದಲ್ಲಿ ಮೂಡುಬಿದಿರೆ ಸಿ.ಎಚ್. ಮೆಡಿಕಲ್ಸ್‌ನ ಮಾಲೀಕರಾದ ಸಿ.ಎಚ್. ಗಫೂರ್, ಡಾ. ಸರಸ್ವತಿ ಭಟ್, ಮಾರೂರು ಗೋಪಾಲ್ ಕೋಟ್ಯಾನ್, ಮಾಲೀಕ ಶರತ್ ಕೋಟ್ಯಾನ್ ಹಾಗೂ ಅವರ ಬಂಧು-ಬಳಗದವರು ಮತ್ತು ಸ್ನೇಹಿತರು ಉಪಸ್ಥಿತರಿದ್ದರು.

​ಸೇವಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಶರತ್ ಕೋಟ್ಯಾನ್ ಅವರು ಸುಮಾರು 21 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದು, ರೋಗಿಗಳ ಪಾಲಿಗೆ ‘ಶರತಣ್ಣ’ನಾಗಿ ಪರಿಚಿತರಾಗಿದ್ದಾರೆ.

ಕೇವಲ ದೂರವಾಣಿ ಕರೆ ಮಾಡಿ ವೈದ್ಯರ ಚೀಟಿ (ಪ್ರಿಸ್ಕ್ರಿಪ್ಷನ್) ಕಳುಹಿಸಿದರೆ ಸಾಕು, ಮನೆಮನೆಗೂ ಔಷಧ ತಲುಪಿಸುವ ಉದಾತ್ತ ಮನೋಭಾವವನ್ನು ಅವರು ಹೊಂದಿದ್ದಾರೆ. ಹಲವು ವರ್ಷಗಳಿಂದ ಸಂಕಷ್ಟದಲ್ಲಿರುವ ಹಾಗೂ ಅನಾರೋಗ್ಯಪೀಡಿತರ ಮನೆಗಳಿಗೆ ನಿರಂತರವಾಗಿ ಔಷಧ ತಲುಪಿಸುತ್ತ ಬಂದಿರುವ ಈ ಸೇವೆಯನ್ನು ಮುಂದೆಯೂ ಮುಂದುವರಿಸುವುದಾಗಿ ಅವರು ಪತ್ರಿಕೆಯೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

​ನೂತನವಾಗಿ ಆರಂಭಗೊಂಡಿರುವ ಈ ಔಷಧ ಮಳಿಗೆಗೆ ಬಂಧುಗಳು, ಸ್ನೇಹಿತರು, ಸಮಾಜ ಬಂಧುಗಳು ಹಾಗೂ ಈ ಹಿಂದೆ ಔಷಧ ಪಡೆದು ಪ್ರಯೋಜನ ಪಡೆದ ರೋಗಿಗಳು ಶುಭ ಹಾರೈಸಿದ್ದಾರೆ.