ಕರೋಪಾಡಿ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ ಅನುದಾನ

0
4

ಕರೋಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪದ್ಯಾಣ ಇದರ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜುರಾದ ಅನುದಾನದ ಡಿ ಡಿ ಅಷ್ಟ ಹಸ್ತಾಂತರ ಕಾರ್ಯಕ್ರಮ

ವಿಟ್ಲ .: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕಿನ ಕೇಪು ವಲಯದ ಕರೋಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪದ್ಯಾಣ ಇದರ ಬ್ರಹ್ಮಕಲಕ್ಷೋತ್ಸವದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ 5 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಡಿ ಡಿ ಹಸ್ತಾಂತರ ಕಾರ್ಯಕ್ರಮ ಅಕ್ಟೋಬರ್ 17 ಶನಿವಾರ ಜರಗಿತು

ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆ 2 ನಿರ್ದೇಶಕ ಬಾಬು ನಾಯ್ಕ ದೇವಸ್ಥಾನದ ಕಮಿಟಿಡಿ ಡಿ ಹಸ್ತಾಂತರಿಸಿ ಮಾತನಾಡಿ ಇದುವರೆಗೆ ಕ್ಷೇತ್ರದ ವತಿಯಿಂದ17500 ದೇವಸ್ಥಾನಗಳಿಗೆ ಅನುದಾನಗಳನ್ನು ನೀಡಲಾಗಿದೆ, ಅದೇ ರೀತಿ ಕ್ಷೇತ್ರದ ಮೂಲಕ ರಾಜ್ಯದಲ್ಲಿ ಪ್ರತಿವರ್ಷ ಎರಡು ಬಾರಿ ಶ್ರದ್ಧಾ ಕೇಂದ್ರಗಳನ್ನು ಸ್ವಚ್ಛತೆ ಮಾಡುವ ಕೆಲಸ ನಡೆಯುತ್ತಿದೆ ಇದುವರೆಗೆ 6,000 ದೇವಸ್ಥಾನಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದುರು.ಮಾಹಿತಿ

ದೇವಸ್ಥಾನದ ಆಡಳಿತ ಮೊ ಕ್ತೆಸರ ರಾದ ಸತ್ಯನಾರಾಯಣ ಭಟ್ , ವಲಯ ಜನಜಾಗೃತಿ ಅಧ್ಯಕ್ಷರಾದ ರಾಧಾಕೃಷ್ಣ ಚೆಲ್ಲಡ್ಕ, ಯೋಜನಾಧಿಕಾರಿ ಸುರೇಶ ಗೌಡ, ಒಕ್ಕೂಟದ ಅಧ್ಯಕ್ಷರುಗಳು, ಶೌರ್ಯ ಘಟಕದ ಅಧ್ಯಕ್ಷ ಪುಷ್ಪಕರ ರೈ , ಹಾಗೂ ಕೇಪು ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು,
ವಲಯದ ಮೇಲ್ವಿಚಾರಕ ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು., ಸೇವಾ ಪ್ರತಿನಿಧಿ ಮೀನಾಕ್ಷಿ ಸಹಕರಿಸಿದರು.