
ಬಹರೇನ್ : ಉಡುಪಿ ಫ್ರೆಂಡ್ಸ್ ವತಿಯಿಂದ ಕೋಸ್ಟಲ್ ಕಪ್ 2026 ಪಂದ್ಯಾಟದ ಅಂಗವಾಗಿ ಮಹಿಳೆಯಗೆ ತ್ರೋಬಾಲ್, ಪುರುಷರಿಗೆ ವಾಲಿಬಾಲ್ ಪಂದ್ಯಾಟ ಕಲ್ಚರಲ್ ಹಾಗೂ ಸ್ಪೋರ್ಟ್ಸ್ ಕ್ಲಬ್ ಆಲಿ ಇಲ್ಲಿ ಅಕ್ಟೋಬರ್ 16 ರಂದು ನಡೆಯಿತು.
ವಾಲಿಬಾಲ್ ಪಂದ್ಯಾಟದಲ್ಲಿ ಜಿಂಜ್ ಎ ವಿನ್ನರ್ ಹಾಗೂ ರನ್ನರ್ ಆಗಿ ನಿಡ ಫ್ರೆಂಡ್ಸ್ ಹಾಗೆಯೇ ಮಹಿಳಾ ತ್ರೋಬಾಲ್ ಪಂದ್ಯಾಟದಲ್ಲಿ ವಿನ್ನರ್ ಆಗಿ ಕನ್ನಡ ಸಂಘ ಬಹರೇನ್, ಪ್ರಥಮ ರನ್ನರ್ ಪ್ ಬಹರೇನ್ ವ್ಯಾರಿಯಾರ್ಸ್ ಕ್ವೀನ್, ದ್ವಿತೀಯ ರನ್ನರ್ ಪ್ ಬೆಹರೇನ್ ವ್ಯಾರಿಯರ್ಸ್ ಜಯಶಾಲಿಯಾಗಿ ಹೊರಹೊಮ್ಮಿದ್ದು, ವಾಲಿಬಾಲ್ ಪಂದ್ಯಾಟದಲ್ಲಿ ಬೆಸ್ಟ್ ಸೆಟ್ಟರ್ ಜಿಂಜ್ ಎ ತಂಡದ ಅಲ್ವಿನ್, ಬೆಸ್ಟ್ ಗ್ರೌಂಡ್ ಪ್ಲೇಯರ್ ಆಗಿ ಜೊಸ್ವಿನ್ ಬೆಸ್ಟ್ ಸ್ಟೈಕರ್ ಆಗಿ ನಿಡ ಫ್ರೆಂಡ್ಸ್ ನ ಅಶ್ವಿತ್ ಶೆಟ್ಟಿ,ಪ್ಲೇಯರ್ ಆಪ್ ಟೂರ್ನಮೆಂಟ್ ಆಗಿ ಜಿಂಗ್ ಎ ತಂಡದ ದಿನೇಶ್ ಕುಲಾಲ್ ಬಹುಮಾನ ಪಡೆದುಕೊಂಡರು.

ಮಹಿಳೆಯರ ತ್ರೋಬಾಲ್ ವಿಭಾಗದಲ್ಲಿ ಬೆಸ್ಟ್ ರಿಸೀವರ್ ಆಗಿ ಬೆಹರೇನ್ ವ್ಯಾರಿಯರ್ಸ್ ತಂಡದ ಸುಷನ್,ಬೆಸ್ಟ್ ಅಟ್ಯಾಕರ್ ಆಗಿ ಕರ್ನಾಟಕ ಸೋಷಿಯಲ್ ಕ್ಲಬ್ ತಂಡದ ರಚೆಲ್,ಬೆಸ್ಟ್ ಆಲ್ ರೌಂಡರ್ ಆಗಿ ಕೊನಿಕ್ ಸೌದಿ ತಂಡದ ಶ್ಯಾಲೆಟ್,ಪ್ಲೇಯರ್ ಆಪ್ ಟೂರ್ನಮೆಂಟ್ ಆಗಿ ಕರ್ನಾಟಕ ಸಂಘದ ಶ್ವೇತಾ ಆಯ್ಕೆಯಾದರು.
ಭಾಗವಹಿಸಿದ ಎಲ್ಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು, ಪಂದ್ಯಾಟದ ವೀಕ್ಷಕ ವಿವರಣೆ ಥೋಮಸ್, ಪಂದ್ಯಾಟದ ನೇರ ಪ್ರಸಾರ ರಾಜೇಶ್ ಮೊಗವೀರ ಹಾಗೂ ಜಾನ್ ಕಾರ್ಯಕ್ರಮ ನಿರೂಪಿಸಿದರು, ಪಂದ್ಯಾಟ ಯಶಸ್ವಿಗೆ ಸಹಕರಿಸಿದ ಎಲ್ಲಾ ಕ್ರೀಡಾ ಪ್ರೋತ್ಸಾಹಕರಿಗೆ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಂಘಟಕರು ಧನ್ಯವಾದವಿತ್ತರು.

ಶಶಿ ಪ್ರಕಾಶ್ ಮುಂದಾಳತ್ವದಲ್ಲಿ ನಡೆದ ಪಂದ್ಯಾಟಕ್ಕೆ ಬಹರೇನ್ ಹಾಗೂ ಸೌದಿ ಅರೇಬಿಯದಿಂದ ಹಾಗೂ , ಸಂಘ ಸಂಸ್ಥೆಯ ಪ್ರಮುಖರು ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತ್ತು.
