ಕುಂಜೂರು ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಅ.20ರಂದು ಮಹಾನವಮಿ ಉತ್ಸವ

0
22

ಕುಂಜೂರು : ಶರನ್ನವರಾತ್ರಿ ಪುಣ್ಯಕಾಲದ ಅಂಗವಾಗಿ ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಅಕ್ಟೋಬರ್ 20ರ ಮಂಗಳವಾರ ಮಹಾನವಮಿ ಉತ್ಸವವು ಭಕ್ತಿಭಾವದಿಂದ ನಡೆಯಲಿದೆ.

ಮಹಾನವಮಿಯ ಪ್ರಯುಕ್ತ ಪೂರ್ವಾಹ್ನ 10 ಗಂಟೆಗೆ ಚಂಡಿಕಾಹೋಮದ ಪೂರ್ಣಾಹುತಿ ನಡೆಯಲಿದೆ. ಬಳಿಕ ಸಾಮೂಹಿಕ ಹೂವಿನ ಪೂಜೆ, ಮಹಾಪೂಜೆ, ಕನ್ನಿಕಾಪೂಜೆ, ಸುವಾಸಿನಿ ಪೂಜೆ ಹಾಗೂ ಮಂತ್ರಾಕ್ಷತೆ ಕಾರ್ಯಕ್ರಮಗಳು ನೆರವೇರಲಿವೆ.

ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.