ಪಾದೂರು ಶ್ರೀ ರಾಮ ಭಜನಾ ಮಂದಿರದ ಸಮಗ್ರ ಜೀರ್ಣೋದ್ಧಾರಕ್ಕೆ ಅ.25ರಂದು ಶಿಲಾನ್ಯಾಸ

0
13

ಪಾದೂರು : ಕಾಪು ತಾಲೂಕು ಪಾದೂರಿನ ಜನತಾ ಕಾಲೋನಿಯಲ್ಲಿರುವ ಶ್ರೀ ರಾಮ ಭಜನಾ ಮಂದಿರದ ಸಮಗ್ರ ಜೀರ್ಣೋದ್ಧಾರ ಕಾರ್ಯಕ್ಕೆ ಅಕ್ಟೋಬರ್ 25ರ ಭಾನುವಾರ ಶಿಲಾನ್ಯಾಸ (ಶಿಲಾಮುಹೂರ್ತ) ಕಾರ್ಯಕ್ರಮ ನಡೆಯಲಿದೆ.

ಅಂದು ಬೆಳಿಗ್ಗೆ 8.15ಕ್ಕೆ ಶ್ರೀ ರಾಮ ಭಜನಾ ಮಂದಿರದ ಆವರಣದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆ ಜರುಗಲಿದೆ. ಶ್ರೀರಾಮ, ಶ್ರೀ ವಿಶ್ವೇಶ್ವರ, ಶ್ರೀ ಮಹಾಲಿಂಗೇಶ್ವರ ಹಾಗೂ ಮಹಾಗಣಪತಿಯ ದೈವಿಕ ಸ್ಮರಣೆಯೊಂದಿಗೆ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗುವುದು.

ಈ ಪುಣ್ಯಕಾರ್ಯದ ಅಂಗವಾಗಿ ಭಕ್ತಾದಿಗಳಿಗೆ ಮುಷ್ಟಿಕಾಣಿಕೆ ಅರ್ಪಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ನಿಧಿ ಕುಂಭಕ್ಕೆ ಚಿನ್ನ, ಬೆಳ್ಳಿ ಹಾಗೂ ನವರತ್ನಗಳನ್ನು ಸಮರ್ಪಿಸಬಹುದಾಗಿದೆ. ಭಕ್ತಾದಿಗಳ ಅನುಕೂಲಕ್ಕಾಗಿ ನಿಗದಿತ ಬೆಲೆ ಪಾವತಿಸಿ ಸಮರ್ಪಿಸಲು ಅಗತ್ಯ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಮಂದಿರದ ಪ್ರಕಟಣೆ ತಿಳಿಸಿದೆ.

ಮಂದಿರದ ಸಮಗ್ರ ಜೀರ್ಣೋದ್ಧಾರ ಕಾರ್ಯಕ್ಕೆ ಭಕ್ತಾದಿಗಳು ತಮ್ಮ ಕೈಲಾದ ಸೇವೆ ಹಾಗೂ ಸಹಕಾರವನ್ನು ನೀಡುವ ಮೂಲಕ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ.