ತೀರ್ಥಹಳ್ಳಿಯಲ್ಲಿ ಅಂಗರಗುಡ್ಡೆ ಆಟೋ ಚಾಲಕ ಹೃದಯಾಘಾತದಿಂದ ಸಾವು

0
45

ಮುಲ್ಕಿ : ಇಲ್ಲಿಗೆ ಸಮೀಪದ ಅಂಗರಗುಡ್ಡೆ ಆಟೋ ಚಾಲಕರೊಬ್ಬರು ತೀರ್ಥಹಳ್ಳಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತರನ್ನು ಅಬ್ದುಲ್ ರೆಹಮಾನ್ (52) ಎಂದು ಗುರುತಿಸಲಾಗಿದೆ.

ಮೃತ ಆಟೋ ಚಾಲಕ ಅಬ್ದುಲ್ ರೆಹಮಾನ್ ರವರು ತೀರ್ಥಹಳ್ಳಿಯಲ್ಲಿರುವ ತಮ್ಮ ಮಗಳ ಮನೆಗೆ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದು ಅಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮೃತರು ಕಿನ್ನಿಗೋಳಿ ಸಮೀಪದ ಎಸ್ ಕೋಡಿ ಪಾರ್ಕ್ ನಲ್ಲಿ ಆಟೋ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು ಹಾಗೂ ಈ ಹಿಂದೆ ಬಸ್ ನಿರ್ವಾಹಕರಾಗಿಯೂ ಕಾರ್ಯನಿರ್ವಹಿಸಿದ್ದರು.

ಅವರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಅಂಗರ ಗುಡ್ಡೆ ಮಸೀದಿ ಅಧ್ಯಕ್ಷ ನಿಸಾರ್ ಅಹಮದ್ ಹಾಗೂ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.