ಮೈಸೂರಿನಲ್ಲಿ ತುಳುನಾಡಿನ ಕಂಬಳ ವೈಭವ; ವಿವಿಧ ವಿಭಾಗಗಳ ವಿಜೇತರ ಪಟ್ಟಿ ಪ್ರಕಟ

0
30

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದ ಅಂಗವಾಗಿ ಅದ್ಧೂರಿ ಕಂಬಳ ಕೂಟವನ್ನು ಆಯೋಜಿಸಲಾಗಿತ್ತು. ಕರಾವಳಿಯ ಜಾನವದ ಕ್ರೀಡೆಯ ರೋಮಾಂಚನಕಾರಿ ಸ್ಪರ್ಧೆಯನ್ನು ಕಣ್ಣುಂಬಿಕೊಳ್ಳಲು ಸಾವಿರಾರು ಜನ ಸಾಗರವೇ ಹರಿದುಬಂದಿತ್ತು. ಕಂಬಳದ ಅತ್ಯಂತ ರೋಚಕ ವಿಭಾಗವಾದ ಕೆನೆ ಹಲಗೆ ಸ್ಪರ್ಧೆಯಲ್ಲಿ 11 ಜೊತೆ ಕೋಣಗಳು ಪಾಲ್ಗೊಂಡಿದ್ದು, 6.5 ಮೀಟರ್ ನಿಶಾನೆಗೆ ನೀರು ಚಿಮ್ಮಿಸಿ ಸಸಿಹಿತ್ತು ವೆಂಕಟ ಪೂಜಾರಿ ಬೈಂದೂರು ಅವರ ಕೋಣಗಳು ಪ್ರಥಮ ಸ್ಥಾನ ಪಡೆದು 16 ಗ್ರಾಂ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡವು. ಕೋಣಗಳನ್ನು ಬೈಂದೂರು ಮಹೇಶ್ ಪೂಜಾರಿ ಅವರು ಯಶಸ್ವಿಯಾಗಿ ನಡೆಸಿದರು.

ಚಿನ್ನದ ಪದಕ ಗೆದ್ದ ಸಸಿಹಿತ್ತು ಕೋಣಗಳು

ಕನೆ ಹಲಗೆ ವಿಭಾಗದಲ್ಲಿ 6.5 ಮೀಟರ್ ನಿಶಾನೆಗೆ ನೀರು ಚಿಮ್ಮಿಸಿ ಪ್ರಥಮ ಸ್ಥಾನ ಪಡೆದ ಸಸಿಹಿತ್ತು ವೆಂಕಟ ಪೂಜಾರಿ ಬೈಂದೂರು ಅವರ ಕೋಣಗಳು 16 ಗ್ರಾಂ ಚಿನ್ನದ ಬಹುಮಾನವನ್ನು ತಮ್ಮದಾಗಿಸಿಕೊಂಡವು.

ವಿವಿಧ ವಿಭಾಗಗಳ ಪ್ರಮುಖ ವಿಜೇತರು ಹಾಗೂ ಓಟಗಾರರು

ಕೆನೆ ಹಲಗೆ

ಪ್ರಥಮ ಸಸಿಹಿತ್ತು ವೆಂಕಟ ಪೂಜಾರಿ ಬೈಂದೂರು (ಹಲಗೆ ಏರಿದವರು: ಬೈಂದೂರು ಮಹೇಶ್ ಪೂಜಾರಿ)

ದ್ವಿತೀಯ – ವಾಮಂಜೂರು ನವೀನಚಂದ್ರ ಆಳ್ವ (ಹಲಗೆ ಏರಿದವರು: ಬೈಂದೂರು ಮಹೇಶ್ ಪೂಜಾರಿ)

ನೇಗಿಲು ಹಿರಿಯ

ಪ್ರಥಮ ಎಂಬತ್ತು ಬಡಗಬೆಟ್ಟು ಶ್ರೀಕಾಂತ್ ಶೆಟ್ಟಿ (ಒಡಿಸಿದವರು: ಕುಂದಾಬಾರಂದಾಡಿ ಸ್ವರೂಪ್)

ದ್ವಿತೀಯ – ಕಕ್ಕೆಪದವು ವರ್ಗಾಲು ಬಾಬು ತನಿಯಪ್ಪ ಗೌಡ (ಓಡಿಸಿದವರು: ಕೃತಿಕ್ ಗೌಡ ಹೆರ್ಗಾಲ್

ನೇಗಿಲು ಕಿರಿಯ

ಪ್ರಥಮ ಉಡುಪಿ ಕಕ್ಕುಂಜೆ ರಾಧಾ ನಿಲಯ ಸಂತೋಷ್ ಶಿವರಾಜ್ ಪೂಜಾರಿ (ಓಡಿಸಿದವರು: ಬೈಂದೂರು ವಿಶ್ವನಾಥ್ ದೇವಾಡಿಗ)

ದ್ವಿತೀಯ – ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ (ಓಡಿಸಿದವರು: ಕುಂದಬಾರಂದಾಡಿ ಮಾಸ್ತಿಕಟ್ಟೆ ಸ್ಮರೂನ್)

ಹಗ್ಗ ಹಿರಿಯ

ಪ್ರಥಮ ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ (ಕೋಣಗಳು: ರಾಜ+ ಶಬರೀಷ, ಓಡಿಸಿದವರು: ಕೃತಿಕ್ ಗೌಡ)

ದ್ವಿತೀಯ – ಎರ್ಮಾಳ್ ವುಚೊಟ್ಟು ಬಾಲಚಂದ್ರ ಲೋಕಯ್ಯ ಶೆಟ್ಟಿ (ಕೋಣಗಳು: ಮಣಿ ಜಿಂಕೆ, ಓಡಿಸಿದವರು: ಪಡುಸಾಂತುರು ಪ್ರಥ್ವಿರಾಜ್ ಪೂಜಾರಿ)

ಹಗ್ಗ ಕಿರಿಯ

ಪ್ರಥಮ ಪದವು ಕಾನಡ್ಕ ಪ್ರೇವಿ ಡಿಸೋಜಾ (ಓಡಿಸಿದವರು: ಕಾವೂರು ಸುದರ್ಶನ)

ದ್ವಿತೀಯ – ರೋಹಿತ್ ಹೆಗ್ಡೆ ಎರ್ಮಾಳ್ (ಓಡಿಸಿದವರು: ಶ್ರೀನಿವಾಸ ಗೌಡ)

ಅಡ್ಡಹಲಗೆ

ಪ್ರಥಮ – ಇರುವೈಲು ದೊಡ್ಡಗುತ್ತು ಜಗದೀಶ್ ಶೆಟ್ಟಿ (ಹಲಗೆ ಏರಿದವರು: ತೆಕ್ಕಟ್ಟಿ ಸುದೀರ್ ದೇವಾಡಿಗ)

ದ್ವಿತೀಯ ವಿಟ್ಲ ಕುಂಡಡ್ಕ ಮರುವಾಳ ಜಯಂತ್ ದಾಸ್ (ಹಲಗೆ ಏರಿದವರು: ಉಳ್ಳೂರು ಕಂದಾವರ ಗಣೇಶ್)

ಸಂಸ್ಕೃತಿಯ ವೈಭವ

ಕರಾವಳಿಯ ಜಾನಪದ ಸೊಗಡನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಣ್ಣುಂಬಿಕೊಳ್ಳಲು ಸಾವಿರಾರು ವೀಕ್ಷಕರು ಭಾಗವಹಿಸಿ ಕಂಬಳದ ರೋಮಾಂಚನಕಾರಿ ಸ್ಪರ್ಧೆಗೆ ಸಾಕ್ಷಿಯಾದರು. ಮೈಸೂರು ದಸರಾ ಕಂಬಳದ ಯಶಸ್ಸು ಕರಾವಳಿಯ ಜಾನಪದ ಕ್ರೀಡೆಯ ವೈಭವವನ್ನು ರಾಜ್ಯಮಟ್ಟದಲ್ಲಿ ಮತ್ತು ವಿಸ್ತರಿಸಿದೆ ರಾತ್ರಿ 11ರವರೆಗೆ ಅತ್ಯಂತ ರೋಚಕವಾಗಿ ನಡೆದ ಈ ಸಾಂಸ್ಕೃತಿಕ ಕ್ರೀಡಾಕೂಟವು ಕರಾವಳಿ ಹಾಗೂ ನಾಡಿನ ಇತರೆ ಭಾಗಗಳ ಜನರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಯಿತು.