ತುಳುನಾಡ ತುಳುವೆರ್, ಕಲ್ಯಾಣ್ : ಮಹಿಳಾ ಸದಸ್ಯೆರಿಂದ ನವರಾತ್ರಿ ಭಜನಾ ಕಾರ್ಯಕ್ರಮ

0
3

ಕಲ್ಯಾಣ್ : ನವರಾತ್ರಿ ಹಬ್ಬದ ಅಂಗವಾಗಿ ತುಳುನಾಡ ತುಳುವೆರ್, ಕಲ್ಯಾಣ್ ಸಂಸ್ಥೆಯ ಮಹಿಳಾ ವಿಭಾಗದ ಸದಸ್ಯೆಯರಿಂದ ವಿವಿಧೆಡೆಗಳಲ್ಲಿ ಒಂಬತ್ತು ದಿನಗಳ ಕಾಲ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ನವರಾತ್ರಿಯ ಒಂಬತ್ತು ದಿನಗಳಲ್ಲಿ ಒಂಬತ್ತು ಬಗೆಯ ಸೀರೆಗಳನ್ನು ಧರಿಸಿ ಭಜನಾ ಸೇವೆ ಸಲ್ಲಿಸಿದ ಸದಸ್ಯೆಯರು, ಭಕ್ತಿಗೀತೆಗಳ ಮೂಲಕ ಭಕ್ತಾದಿಗಳನ್ನು ರಂಜಿಸಿದರು.

ಸಂಸ್ಥೆಯ ಸದಸ್ಯೆಯರ ಮನೆಗಳು ಹಾಗೂ ಆಹ್ವಾನಿತ ಮಂದಿರಗಳಲ್ಲಿ ಭಜನಾ ಕಾರ್ಯಕ್ರಮಗಳು ನಡೆದವು. ಸಂಸ್ಥೆಯ ಸಂಸ್ಥಾಪಕರಾದ ಅಶೋಕ್ ಎಲ್. ಪೂಜಾರಿ ಉಲ್ಯ ಗುತ್ತು, ಪಂಜ–ಕೊಯಿಕುಡೆ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ನೆರವೇರಿದವು.

ತುಳುನಾಡ ತುಳುವೆರ್, ಕಲ್ಯಾಣ್ ಸಂಸ್ಥೆಯ ಕಚೇರಿಯಲ್ಲಿ ನಡೆದ ಭಜನಾ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಮಹಿಳಾ ಸದಸ್ಯೆಯರು ಭಕ್ತಿಭಾವದಿಂದ ಭಜನೆಗಳನ್ನು ಹಾಡಿ ನವರಾತ್ರಿ ಆಚರಣೆಗೆ ವಿಶೇಷ ಮೆರುಗು ನೀಡಿದರು.

ವಿವಿಧೆಡೆಗಳಲ್ಲಿ ನಡೆದ ಭಜನಾ ಕಾರ್ಯಕ್ರಮಗಳಲ್ಲಿ ರೇಖಾ ಶೆಟ್ಟಿ, ಸುಮಿತ್ರ ಪೂಜಾರಿ, ಪ್ರಭಾವತಿ ಸುವರ್ಣ, ಅಂಜನಾ ಪೂಜಾರಿ, ಭವಾನಿ ಪೂಜಾರಿ, ವಿಜಯ ಕೋಟ್ಯಾನ್, ಸುಮಿತಾ ಶೆಟ್ಟಿ, ಪದ್ಮಿನಿ ಕೋಟ್ಯಾನ್, ಸುಮತಿ ಕರ್ಕೇರ, ಯಮುನಾ ಕುಲಾಲ್, ದೇವಕಿ ಪೂಜಾರಿ, ವಸಂತಿ, ಪ್ರಜ್ಞಾ ಪೂಜಾರಿ, ಪ್ರತಿವ ಜೇನ, ಕೋಟ್ಯಾನ್, ಯಮುನಾ ಸುವರ್ಣ, ಹೇಮ, ಕಾವ್ಯ ಪೂಜಾರಿ, ಶ್ರಿಯಲ ಶೇರಿಗಾರ್, ನಿಕ್ಷಿತ ಕುಲಾಲ್, ನಯನ ಕಾಂಚನ್, ನಮ್ರತಾ ಸುವರ್ಣ, ಪ್ರೇಮ ಶೆಟ್ಟಿ, ವಿಶಾಲಾಕ್ಷಿ ಕೋಟ್ಯಾನ್, ಭಾರತಿ ಕರ್ಕೇರ, ಪ್ರೀತಿ ಕೋಟ್ಯಾನ್, ಅನುಪಮಾ ಕೋಟ್ಯಾನ್, ಜ್ಯೋತಿ ಸುವರ್ಣ, ನಿಶಾ ಕೋಟ್ಯಾನ್, ಆಯಿಷವಿ ಕೋಟ್ಯಾನ್, ಸುಜಾತ ಶೆಟ್ಟಿ, ತುಳಸಿ ಕೋಟ್ಯಾನ್, ಸುವರ್ಣ, ಹೃದಯ ಕೊಚ್ರೆಕರ್, ಶಿಲ್ಪಿ ಕರ್ಕೇರ, ಚಂದ್ರ, ಮೇಘನಾ ಕರ್ಕೇರ, ಜಯಶ್ರೀ ಪೂಜಾರಿ, ಶಶಿ ಜೆ. ಪೂಜಾರಿ, ಸಂಗೀತ, ಪುಷ್ಪ, ಶಶಿ ಎಸ್. ಪೂಜಾರಿ, ಬೀನಾ ಸಾಲಿಯಾನ್, ಸಿದ್ಧಿ ಕೋಟ್ಯಾನ್, ಖುಷಿ ಸಾಲಿಯಾನ್, ವನಜ, ಪ್ರಮೋದ್ ಸಾಲಿಯಾನ್, ಗಣೇಶ್ ಸುವರ್ಣ, ಕನ್ಹ್ ಜೇನ ಹಾಗೂ ಹಿರೇನ್ ಕೊಚ್ರೆಕರ್ ಭಾಗವಹಿಸಿದ್ದರು.

ಕಾರ್ಯಕ್ರಮದ ಅಂತ್ಯದಲ್ಲಿ ಮಂಗಳಾರತಿ ನೆರವೇರಿಸಿ, ಭಕ್ತಾದಿಗಳಿಗೆ ತೀರ್ಥಪ್ರಸಾದ ವಿತರಿಸಲಾಯಿತು. ನವರಾತ್ರಿಯ ಒಂಬತ್ತು ದಿನಗಳ ಕಾಲ ನಡೆದ ಈ ಭಜನಾ ಸೇವೆಯು ಭಕ್ತಿ, ಧಾರ್ಮಿಕ ಶ್ರದ್ಧೆ ಹಾಗೂ ಸಂಘಟನೆಯ ಸದಸ್ಯೆಯರ ಒಗ್ಗಟ್ಟನ್ನು ಪ್ರತಿಬಿಂಬಿಸಿತು.