ವಿಜಯದಶಮಿ ಪರ್ವಕಾಲದಲ್ಲಿ ಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ತೆನೆಪೂಜೆ ಸಂಪನ್ನ

0
16

ವಿಜಯದಶಮಿ ಪರ್ವಕಾಲದಲ್ಲಿ ಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ತೆನೆಪೂಜೆ ನಡೆಯಿತು.

ಭತ್ತದ ತೆನೆಯನ್ನು ಪರಂಪರೆಯಂತೆ ಸೋದೆ ಮಠದ ಮುಂಭಾಗದಲ್ಲಿ ಪೂಜಿಸಿ ಚಿನ್ನದ ಪಲ್ಲಕ್ಕಿಯಲ್ಲಿರಿಸಿ ಮಂಗಳವಾದ್ಯಗಳೊಂದಿಗೆ ರಥಬೀದಿಯಲ್ಲಿ ಮೆರವಣಿಗೆಯ ಮೂಲಕ ಶ್ರೀ ಕೃಷ್ಣ ಮಠಕ್ಕೆ ತರಲಾಯಿತು. ವರ್ಷಕ್ಕೊಮ್ಮೆ ‌ಮಾತ್ರ ತೆರೆಯುವ ಕೃಷ್ಣ ಗರ್ಭಗೃಹದ ಪೂರ್ವದ ಬಾಗಿಲನ್ನು ತೆರೆದು ಶ್ರೀ ಕೃಷ್ಣ ನಿಗೆ ಸಮರ್ಪಿಸಿ ಪೂಜಿಸಿ ನಂತರ ಮುಂಭಾಗದ ಲಕ್ಷ್ಮೀ ಮಂಟಪದಲ್ಲಿ ಅಷ್ಟಮಠ ಹಾಗೂ ಇತರ ಉಪಮಠಗಳಿಗೆ ತೆನೆ ವಿತರಿಸಲಾಯಿತು.

ನಂತರ ಬಡಗುಮಾಳಿಗೆಗೆ ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ತಂದು ಭಕ್ತರಿಗೆ ಹಂಚಿದರು.ಈ ಸಂದರ್ಭದಲ್ಲಿ ಶ್ರೀ ಮಠದ ದಿವಾನ ಡಾ.ಉದಯಕುಮಾರ್ ‌ಸರಳತ್ತಾಯ,ಪಾರುಪತ್ಯೆದಾರ ಶ್ರೀಶ ಭಟ್ ಕಡೆಕಾರು, ಹಾಗೂ ಶ್ರೀ ಮಠದ ಪ್ರಮುಖರು ಮತ್ತು ಸಿಬ್ಬಂದಿ ,ಭಕ್ತರು ಉಪಸ್ಥಿತರಿದ್ದರು