
ಉಡುಪಿ ಅಂಬಾಗಿಲು ವೈಶ್ಯವಾಣಿ ಸಮಾಜದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಪುತ್ತೂರು ನವರಾತ್ರಿ ಹಾಗೂ 32 ನೇ ವರ್ಷದ ಶ್ರೀ ಶಾರದಾ ಮೊಹೋತ್ಸವ ಅದ್ದೊರಿಯಾಗಿ ನೆಡೆದು ಅ 21 ರಂದು ಶ್ರೀ ಶಾರದಾ ದೇವಿಯ ವಿಸರ್ಜನಾ ಶೋಭಾ ಯಾತ್ರೆ ನೆಡೆಸಿ ಕಲ್ಯಾಣಪುರದ ಸ್ವರ್ಣ ನದಿಯಲ್ಲಿ ಜಲಸ್ತಂಭನ ಮಾಡಲಾಯಿತು.
ದೇವಿಯ ಸನ್ನಿಧಿಯಲ್ಲಿ ಪ್ರತಿದಿನ ಭಜನೆ , ದೇವರಿಗೆ ವಿಶೇಷ ಅಲಂಕಾರ , ಚಂಡಿಕಾ ಯಾಗ , ದೀಪ ನಮಸ್ಕಾರ , ದುರ್ಗಾ ನಮಸ್ಕಾರ , ಸಮಾರಾಧನೆ ಜರಗಿತು.

ದೇವಳದ ತಂತ್ರಿಗಳಾದ ಶ್ರೀನಿವಾಸ ತಂತ್ರಿಗಳು ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿದರು , ಪ್ರಧಾನ ಅರ್ಚಕರಾದ ರಾಘವೇಂದ್ರ ಭಟ್ ಮಹಾಪೂಜೆ ನೆರವೇರಿಸಿದರು
