ಸುಳ್ಯ ದಸರಾ ಪ್ರಯುಕ್ತ ಸಂಗೀತ ಗಾನ ಸಂಭ್ರಮ

0
25

ಸುಳ್ಯ: ಸುಳ್ಯ ದಸರಾ ಮಹೋತ್ಸವದ ಪ್ರಯುಕ್ತ ಮಾಸ್ಟರ್ ಕ್ರಿಯೇಶನ್ಸ್ ಸುಳ್ಯ ಇದರ ವತಿಯಿಂದ ಅಕ್ಟೋಬರ್ 24ರಂದು ಸಂಜೆ 5 ಗಂಟೆಯಿಂದ ‘ಸಂಗೀತ ಗಾನ ಸಂಭ್ರಮ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಸುಳ್ಯದ ಶ್ರೀ ರಾಮ್ ಪೇಟೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ‘ಮಾಸ್ಟರ್ ಮ್ಯೂಸಿಕಲ್ ನೈಟ್’ ಸಂಗೀತ ರಸಮಂಜರಿ ಪ್ರೇಕ್ಷಕರನ್ನು ರಂಜಿಸಲಿದೆ. ಅದ್ಭುತ ಗಾಯಕ-ಗಾಯಕಿಯರ ಸಮ್ಮಿಲನದೊಂದಿಗೆ ಸಂಗೀತಾಸಕ್ತರಿಗೆ ಮನರಂಜನೆಯ ರಸದೌತಣ ನೀಡಲು ಸಿದ್ಧತೆ ನಡೆಸಲಾಗಿದೆ.

ಕಾರ್ಯಕ್ರಮದಲ್ಲಿ ಸಾನ್ವಿ ಕೆ.ಎಸ್. ಸುಳ್ಯ ಮತ್ತು ಚಾರ್ವಿ ಅವರಿಂದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಲಿದೆ. ಸಂಗೀತ ಹಾಗೂ ನೃತ್ಯದ ಸಮ್ಮಿಲನದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮವು ಸುಳ್ಯ ದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿದೆ. ಸಂಗೀತಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ವಿನಂತಿಸಿದ್ದಾರೆ.