ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಪತ್ತೆ

0
36

ಕಾಪು : ಪಾಂಗಳ ರಾಷ್ಟ್ರೀಯ ಹೆದ್ದಾರಿ 66, ಬದಿಯಲ್ಲಿರುವ ಅಂಗಡಿ ಹೊರಜಗುಲಿಯಲ್ಲಿ ಅಪರಿಚಿತ ಗಂಡಸಿನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಶನಿವಾರ ನಡೆದಿದೆ.

ಕೆಲವು ತಿಂಗಳುಗಳಿಂದ ಅಂಗಡಿಯ ಮಾಲಿಕರು ವ್ಯಪಾರ ಸ್ಥಗಿತಗೊಳಿಸಿದ್ದು, ಬಾಗಿಲು ತೆರೆಯದೆ ಮುಚ್ಚಿಟ್ಟಿದ್ದರು. ಮಾಲಿಕರು ಅಂಗಡಿ ವಠಾರ ಶುಚಿಗೊಳಿಸಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿ ಮೃತಪಟ್ಟು ಹತ್ತು ದಿನಗಳು ಕಳೆದಿರುವ ಶಂಕೆವ್ಯಕ್ತವಾಗಿದೆ. ಮೃತವ್ಯಕ್ತಿಯ ಹೆಸರು ವಿಳಾಸ ತಿಳಿದುಬಂದಿಲ್ಲ. ಮೃತರ ವಾರುಸುದಾರರು ಕಾಪು ಪೋಲಿಸ್ ಠಾಣೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಕಾಪು ಪೋಲಿಸ್ ಠಾಣೆಯ ಮುಖ್ಯ ಆರಕ್ಷಕ ಅರುಣ್ ಉಪ್ಪೂರು, ಆರಕ್ಷಕ ಸಿಬ್ಬಂದಿ ಶಿವ ನಾಯಕ್ ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡುವರು ಕೊಳೆತ ಕಳೇಬರ ತೆರವುಗೊಳಿಸಿ, ಉಡುಪಿ ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಇಲಾಖೆಗೆ ನೆರವಾದರು.