ಮಧ್ವ ಜಯಂತಿ ಸಂಪನ್ನ – ಸಾಧಕರಿಗೆ ‘ಮಧ್ವ ವಿಜಯ’, ‘ಹನುಮ ಮಧ್ವೇಶ’ ಪ್ರಶಸ್ತಿ ಪ್ರದಾನ

0
17

ಧಾರ್ಮಿಕ, ಆಧ್ಯಾತ್ಮಿಕ, ಸಾಹಿತ್ಯ, ವೈದ್ಯಕೀಯ, ಶಿಕ್ಷಣ, ಉದ್ಯಮ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧಕರಿಗೆ ವಿಶ್ವ ಮಧ್ವಮತ ವೆಲ್ಫೇರ್ ಫೌಂಡೇಶನ್ ಗೌರವ

ಜಗದ್ಗುರು ಶ್ರೀ ಮಧ್ವಾಚಾರ್ಯರ ದ್ವೈತ ವೇದಾಂತ ತತ್ತ್ವದ ಪ್ರಚಾರ ಹಾಗೂ ಮಾಧ್ವ ಸಮುದಾಯದ ಕ್ಷೇಮಾಭಿವೃದ್ಧಿಯ ಉದ್ದೇಶದಿಂದ ವಿಶ್ವ ಮಧ್ವಮತ ವೆಲ್ಫೇರ್ ಫೌಂಡೇಶನ್ (ನೋಂ.) ವತಿಯಿಂದ ಹಮ್ಮಿಕೊಂಡಿದ್ದ ಮಧ್ವ ಜಯಂತಿಯನ್ನು ಬಸವನಗುಡಿಯ ಉತ್ತರಾದಿ ಮಠದಲ್ಲಿ ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಡಾ. ಸತ್ಯಧ್ಯಾನಾಚಾರ್ಯ ಕಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಫೌಂಡೇಶನ್ ದ್ವೈತ ಸಿದ್ಧಾಂತದ ಪ್ರಚಾರ, ಸಮುದಾಯದ ಕ್ಷೇಮಾಭಿವೃದ್ಧಿ, , ಸಾಮರಸ್ಯ ಹಾಗೂ ನೆರವು ನೀಡುವ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು . ರಾಜ್ಯ ಸರ್ಕಾರ ಮಧ್ವ ಜಯಂತಿ ಯನ್ನು ಅಧಿಕೃತ ಘೋಷಣೆ ಮಾಡುವಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ ಮುಳಗುಂದ್ ರವರ ಪಾತ್ರ ಸ್ಮರಣೀಯ ಎಂದು ತಿಳಿಸಿದರು .

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ರವರು ಧಾರ್ಮಿಕ ಕ್ಷೇತ್ರದ ವಿದ್ವಾನ್ ಪವಮಾನಾಚಾರ್ಯ ಕಲ್ಲಾಪುರ, ಜ್ಯೋತಿಷಿ ಡಾ. ಪ್ರಸನ್ನಾಚಾರ್ಯ ಕಟ್ಟಿ, ದಾಸ ಸಾಹಿತ್ಯ ಪ್ರಸಾರಕ ಪ್ರಮೋದಾಚಾರ್ಯ ಹನಮಸಾಗರ್ ಹಾಗೂ ಅನುಮಾನತೀರ್ಥ ಆಚಾರ್ಯ ಅವರಿಗೆ ‘ಮಧ್ವ ವಿಜಯ’ ಪ್ರಶಸ್ತಿ ; ಹೃದ್ರೋಗ ತಜ್ಞ ಡಾ. ವೇಣುಗೋಪಾಲ ರಾಮರಾವ್, ಉದ್ಯಮಿ ಬಿ.ಎಸ್. ವೇದವ್ಯಾಸ, ನರಗುಂದ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ. ಶಚೀಂದ್ರ ಎಲ್. ನರಗುಂದ ಹಾಗೂ ಹಿರಿಯ ಪತ್ರಕರ್ತ ‘ಕೋಲಾರ ವಾಣಿ’ ಸಂಪಾದಕ ಬಿ.ಎನ್. ಮುರಳಿಪ್ರಸಾದ್ ಅವರಿಗೆ ‘ಹನುಮ ಮಧ್ವೇಶ’ ಪ್ರಶಸ್ತಿ ಮಾಡಿ ಗೌರವಿಸಿದರು .

ಸಿ.ಎ. ಮುರಳಿ,ಹಾಗೂ ಸಂಸ್ಕೃತಿ ಚಿಂತಕ, ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ , ಫೌಂಡೇಶನ್ ಕರ್ನಾಟಕ ರಾಜ್ಯಾಧ್ಯಕ್ಷ ಕೃಷ್ಣ ಎ.ಪಿ. ಸಂಸ್ಥಾಪಕ ಅಧ್ಯಕ್ಷ ವೆಂಕೋಬ ರಾವ್ ಬುಕ್ಕಸಾಗರ, ಸಹ ಸಂಸ್ಥಾಪಕ – ಖಜಾಂಚಿ ಶ್ರೀನಿವಾಸ ಜೋಶಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಜೋಯಿಸ್ ,ಬೆಂಗಳೂರು ನಗರ ಅಧ್ಯಕ್ಷ ಅನಿಲ್ ಆಚಾರ್ಯ , ಮೋಹನ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.