
ಶ್ರೀ ರುದ್ರ ಪಠಣ ಸಮಿತಿ ಬಂಟ್ವಾಳದ ವತಿಯಿಂದ ಉಜಿರೆಯ ಕಿರಿಯಾಡಿ ಶ್ರೀ ಕ್ಷೇತ್ರದ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ರುದ್ರ ನಮಕ ಚಮಕ ಹಾಗೂ ವೇದ ಸೂಕ್ತಗಳ ಪಾರಾಯಣವು ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಅರ್ಚಕ ಶಿವರಾಗವ ಭಟ್, ಮುಕ್ತೇಶ್ವರ ವಾಸುದೇವ ಸಂಪಿಗೆತಾಯ, ಸಂಚಾಲಕ ಎರವಿಶಂಕರ ಮೈಯ್ಯ, ಶಾಂತರಾಮ ರಾವ್ ಎಸ್.ಬಿ., ಎನ್. ರಾಮಚಂದ್ರ ಮೈಯ್ಯ, ಉಜಿರೆ ಎಸ್‌ಡಿಎಂ ಕಾಲೇಜಿನ ಉಪನ್ಯಾಸಕ ರವಿಚಂದ್ರ ಕಾರಂತ, ನಿವೃತ್ತ ಪಿಡಬ್ಲ್ಯೂಡಿ ಇಂಜಿನಿಯರ್ ಶ್ರೀನಿವಾಸ ಹೊಳ್ಳ ಮಕ್ಕಾರು, ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಸೀತಾರಾಮ ಮೈಯ್ಯ, ಅರ್ಬಿ ಕೃಷ್ಣಕುಮಾರ್ ಸೋಮಯಾಜಿ, ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಗಣೇಶ್ ಕಾರಂತ, ಕೆ. ಮಿಥುನ ರಾವ್, ಎ. ಧನೇಶ್ವರ ಕಾರಂತ, ಬಿ. ನಾರಾಯಣ ರಾವ್ ಹಾಗೂ ನಿವೃತ್ತ ಉಪನ್ಯಾಸಕ ಅನಂತ ಪದ್ಮನಾಭ ರಾವ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಸಾಮೂಹಿಕ ರುದ್ರ ಪಾರಾಯಣ ಮತ್ತು ವೇದ ಸೂಕ್ತಗಳ ಪಠಣದ ಮೂಲಕ ಲೋಕಕಲ್ಯಾಣ ಹಾಗೂ ಧಾರ್ಮಿಕ ಜಾಗೃತಿಯ ಆಶಯವನ್ನು ವ್ಯಕ್ತಪಡಿಸಲಾಯಿತು. ಕಾರ್ಯಕ್ರಮವು ಭಕ್ತಿಭಾವದ ವಾತಾವರಣದಲ್ಲಿ ನಡೆಯಿತು.
