ಸ್ವಾಸ್ಥ್ಯ ಸಂಕಲ್ಪದಡಿ ಶೂನ್ಯ ತ್ಯಾಜ್ಯ ಆಸ್ಪತ್ರೆ ಆವರಣ

0
6

ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರವು ರೋಟರಿ ಕ್ಲಬ್ ಸಂಯೋಗದೊಂದಿಗೆ ಸ್ವಾಸ್ಥ್ಯ ಸಂಕಲ್ಪ ಮಾಸ ಆಚರಿಸುತ್ತಿದೆ. ಇದರ ಅಡಿಯಲ್ಲಿ ನಮ್ಮ ಆಸ್ಪತ್ರೆ, ಸ್ವಚ್ಛ ಹಸಿರು, ಶೂನ್ಯ ತ್ಯಾಜ್ಯ ಆವರಣ ಕಾರ್ಯಕ್ರಮವನ್ನು ಅಕ್ಟೋಬರ್ 27ರಂದು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿತ್ತು.

ಮೂಡುಬಿದರೆ ರೋಟರಿ ಕ್ಲಬ್ ಅಧ್ಯಕ್ಷ ಡಾ ಆಶೀರ್ವಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪುರಸಭಾ ಪರಿಸರ ಅಭಿಯಂತರ ಶಿಲ್ಪಾ, ಉದ್ಯಮಿ ನಾರಾಯಣ ಪಿ ಎಂ, ಜಯರಾಮ ಕೋಟ್ಯಾನ್, ರತ್ನಾಕರ್ ಜೈನ್, ಸಂದೀಪ್ ನಾಯ್ಕ, ಎಸ್ಎನ್ ಬೋರ್ಕರ್, ಆರೋಗ್ಯ ನಿರೀಕ್ಷಕಿ ಶಶಿರೇಖಾ, ಆರೋಗ್ಯ ಕಾರ್ಯಕರ್ತರುಗಳು, ಪುರಸಭಾ ಅಧಿಕಾರಿಗಳು ಹಾಜರಿದ್ದರು.

ಹಿರಿಯ ಆರೋಗ್ಯ ನಿರೀಕ್ಷಕ ಖಾದರ್ ನದಾಫ್ ಕಾರ್ಯಕ್ರಮ ನಿರೂಪಿಸಿದರು. ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಅಕ್ಷತಾ ನಾಯಕ್ ಎಲ್ಲರನ್ನು ಸ್ವಾಗತಿಸಿ ವಂದಿಸಿದರು.

ವರದಿ ರಾಯಿ ರಾಜ ಕುಮಾರ್