
ಉಡುಪಿ : ಅಸಹಾಯಕ ಸ್ಥಿತಿಯನ್ನು ಎದುರಿಸುತ್ತಿದ್ದ ಇರ್ವರು ರೋಗಿಗಳ ರಕ್ಷಿಸುವ ಕಾರ್ಯಚರಣೆ ಸಮಾಜಸೇವಕ ನಿತ್ಯಾನಂದ ಒಳಕಾಡುವರಿಂದ ನಡೆದಿದೆ .
ಹಿರಿಯಡ್ಕ ಬಸ್ ನಿಲ್ದಾಣದ ಹತ್ತಿರ ರಾತ್ರಿ ವೇಳೆ ಬಿದ್ದಿರುವ ವ್ಯಕ್ತಿಯ ಕುರಿತು ಸಮಾಜಸೇವಕ ನಿತ್ಯಾನಂದ ಒಳಕಾಡು ಆವರಿಗೆ ಸ್ಥಳೀಯ ಪೋಲಿಸ್ ಠಾಣೆಯಿಂದ ಮಾಹಿತಿ ಬಂದಿತ್ತು. ತಕ್ಷಣ ಒಳಕಾಡುವರು ಉಡುಪಿಯಿಂದ ಘಟನಾ ಸ್ಥಳಕ್ಕೆ ತೆರಳಿ, ಅಂಬುಲೇನ್ಸ್ ವಾಹನದಲ್ಲಿ ವ್ಯಕ್ತಿಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದರು.
ಈ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿ ಸುಲೋಚನಾ ಪೂಜಾರಿ ಸಹಕರಿಸಿದರು. ಹಾಗೆಯೇ ಈ ಘಟನೆಯ ತರುವಾಯ ಶ್ರೀಕೃಷ್ಣ ಮಠವನ್ನು ಸಂಪರ್ಕಿಸುವ ಕನಕದಾಸ ಮಾರ್ಗದ ನಡುಮದ್ಯೆ ಕುಸಿದುಬಿದ್ದಿರುವ, ವ್ಯಕ್ತಿಯನ್ನು ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಿ ಮನೆಗೆ ರವಾನಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸ್ಪಟ್ಟಿರುವ ವ್ಯಕ್ತಿ ತೀರ್ಥಹಳ್ಳಿಯ ರಾಘವೇಂದ್ರ ನಾಯಕ್ ಎಂದು ತಿಳಿದುಬಂದಿದೆ.
