ಬಹರೈನ್‌ನಲ್ಲಿ ಅ. 30ರಂದು ಷಷ್ಠ ವಾರ್ಷಿಕ ‘ಪಟ್ಲ–ಯಕ್ಷ ಸಂಭ್ರಮ’

0
47

‘ಶಿವ ಪಂಚಾಕ್ಷರಿ ಮಹಿಮೆ’ ಯಕ್ಷಗಾನ ಪ್ರದರ್ಶನ

ಬಹರೈನ್ : ಕನ್ನಡ ಸಂಘ ಬಹರೈನ್ ಆಶ್ರಯದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಬಹರೈನ್–ಸೌದಿ ಘಟಕದ ವತಿಯಿಂದ ಷಷ್ಠ ವಾರ್ಷಿಕ ‘ಪಟ್ಲ–ಯಕ್ಷ ಸಂಭ್ರಮ’ ಶಿವ ಪಂಚಾಕ್ಷರಿ ಮಹಿಮೆ ಯಕ್ಷಗಾನವು ಅಕ್ಟೋಬರ್ 30ರಂದು ಶುಕ್ರವಾರ ನಡೆಯಲಿದೆ. ಸಂಜೆ 4.30ರಿಂದ ಮನಾಮ ಬಹರೈನ್‌ನ ಕನ್ನಡ ಸಂಘದ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

‘ಶಿವ ಪಂಚಾಕ್ಷರಿ ಮಹಿಮೆ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ನಾಟ್ಯ ಮಯೂರಿ ರಕ್ಷಿತ್ ಶೆಟ್ಟಿ ಪಡ್ರೆ, ರಂಗರತ್ನಾಕರ ಚಂದ್ರಶೇಖರ ಧರ್ಮಸ್ಥಳ, ಚೆಂಡೆಯ ಮಾಂತ್ರಿಕ ಶ್ರೀ ಕೌಶಲ್ ರಾವ್ ಪುತ್ತಿಗೆ ಹಾಗೂ ಸವ್ಯಸಾಚಿ ಶ್ರೀ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಸೇರಿದಂತೆ ಯಕ್ಷಗಾನ ಕ್ಷೇತ್ರದ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಸುಭಾಶ್ಚಂದ್ರ ಹಾಗೂ ಅಧ್ಯಕ್ಷರಾದ ಗೋಪಾಲ್ ಶೆಟ್ಟಿ ಮೀಯಪದವು ಉಪಸ್ಥಿತರಿರಲಿದ್ದಾರೆ. ಕಾರ್ಯದರ್ಶಿ ಸಂತೋಷ್ ನಾಯಕ್ ಕಾರ್ಯಕ್ರಮದ ಸಂಘಟನಾ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.