ಕೂಟ ಮಹಾ ಜಗತ್ತು ಬಂಟ್ವಾಳ ಅಂಗಸಂಸ್ಥೆಯ 24ನೇ ಸಂಪರ್ಕ ಸಭೆ

0
32

ಬಂಟ್ವಾಳ : ಕೂಟ ಮಹಾ ಜಗತ್ತು ಬಂಟ್ವಾಳ ಅಂಗಸಂಸ್ಥೆಯ 24ನೇ ಸಂಪರ್ಕ ಸಭೆಯು ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಬ್ರಹ್ಮಶ್ರೀ ವಾಹಕ ಶಂಕರನಾರಾಯಣ ಹೊಳ್ಳ ಅವರ ಶಿವಾಮೃತ ಮನೆಯಲ್ಲಿ ಕೆ. ರಮೇಶ್ ಹೊಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ನವೆಂಬರ್ 30, 2026ರ ಸೋಮವಾರದಂದು ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕ್ಷೇತ್ರದಲ್ಲಿ ನಡೆಯಲಿರುವ ಮಹಾ ರುದ್ರಯಾಗದ ಕುರಿತು ಮಾಹಿತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಜನವರಿ 2017ರಲ್ಲಿ ವಾರ್ಷಿಕ ಕ್ರೀಡಾಕೂಟ ಆಯೋಜಿಸುವ ಕುರಿತು ತೀರ್ಮಾನಿಸಲಾಯಿತು.

ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಜಗದೀಶ ಹೊಳ್ಳ, ಗಾಯತ್ರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಬಿ ನಾರಾಯಣ ಸೋಮಯಾಜಿ, ಮಹಿಳಾ ಸಮಿತಿ ಅಧ್ಯಕ್ಷೆ ಯಮುನಾ ಐಗಳು, ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಕುರಿಯಾಳ ಗಣಪತಿ ಸೋಮಯಾಜಿ, ಎ. ರವಿಶಂಕರ ಮೈಯ್ಯ, ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಮೈಯ್ಯ, ಪಂಚಾಯತ್ ಮಾಜಿ ಸದಸ್ಯ ಬಳ್ಳಿ ದಡ್ಡರಾಮಕೃಷ್ಣ ಮೈಯ್ಯ, ರಾಜಾರಾಮ ಐತಾಳ ಕಂದೂರು, ಸುರೇಶ್ ಹೊಳ್ಳ, ರಾಮಚಂದ್ರ ಮೈಯ್ಯಯನ್, ನರೇಶ್ ಹೊಳ್ಳ, ಶಾಂತರಾಮರಾವ್ ಎಸ್.ಬಿ. ಹಾಗೂ ಶ್ರೀನಿವಾಸ ಸೋಮಯಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.