ಕುಂದಾಪುರ: ಹೊಸಾಡು ಮುಳ್ಳಿಕಟ್ಟೆಯ ರಾಷ್ಟ್ರೀಯ ಹೆದ್ದಾರಿ 66ರ ಬಳಿ ವಾತ್ಸಲ್ಯ ಸ್ಟೋನ್ಸ್ ಆ್ಯಂಡ್ ಟೈಲ್ಸ್ ಸಂಸ್ಥೆಯ ನೂತನ ಟೈಲ್ಸ್ ಮತ್ತು ಗ್ರಾನೈಟ್ ಶೋರೂಂ ಅಕ್ಟೋಬರ್ 30ರ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಶುಭಾರಂಭಗೊಳ್ಳಲಿದೆ.
ಗ್ರಾಹಕರಿಗೆ ಗುಣಮಟ್ಟದ ಟೈಲ್ಸ್, ಗ್ರಾನೈಟ್ಸ್, ಸ್ಯಾನಿಟರಿವೇರ್ ಹಾಗೂ ವಿವಿಧ ರೀತಿಯ ಹೋಮ್ ಆ್ಯಕ್ಸೆಸರೀಸ್ಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಈ ನೂತನ ಶೋರೂಂ ಆರಂಭಿಸಲಾಗುತ್ತಿದೆ.
ವಿಶಿಷ್ಟ ವಿನ್ಯಾಸಗಳು, ಆಕರ್ಷಕ ಮಾದರಿಗಳು ಹಾಗೂ ಬಾಳಿಕೆ ಬರುವ ಉತ್ಪನ್ನಗಳ ಮೂಲಕ ಮನೆ, ಕಚೇರಿ ಮತ್ತು ವಾಣಿಜ್ಯ ಕಟ್ಟಡಗಳ ಒಳಾಂಗಣ ಹಾಗೂ ಹೊರಾಂಗಣ ವಿನ್ಯಾಸಕ್ಕೆ ಅಗತ್ಯವಿರುವ ವೈವಿಧ್ಯಮಯ ಉತ್ಪನ್ನಗಳು ಇಲ್ಲಿ ಲಭ್ಯವಾಗಲಿವೆ.

