ಬೆಳ್ಮಣ್ಣು ಬಿಲ್ಲವ ಸಂಘದಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

0
7

ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ) ಬೆಳ್ಮಣ್ಣು ಇದರ ವ್ಯಾಪ್ತಿಯ ನಂದಳಿಕೆ, ಕೆದಿಂಜೆ, ಬೋಳ, ಕಲ್ಯಾ,ಸೂಡ, ಇನ್ನಾ, ಗ್ರಾಮಗಳ ಒಕ್ಕೂಟದ ಬಿಲ್ಲವ ಸಂಘದ ಬಿಲ್ಲವರನ್ನು ಒಗ್ಗೂಡಿಸುವ ಸಲುವಾಗಿ ಶ್ರೀಕೃಷ್ಣ ಸಮೂಹ ಸಂಸ್ಥೆಗಳ ಮಾಲಕರು ಹಾಗೂ ಬಿಲ್ಲವ ಸಂಘದ ಗೌರವಾಧ್ಯಕ್ಷರು ಆಗಿರುವ ಶ್ರೀ ಎಸ್.ಕೆ. ಸಾಲಿಯಾನ್ ರವರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಸಂಘದ ಅಧ್ಯಕ್ಷರಾಗಿರುವ ಸುಭಾಷ್ ಕುಮಾರ್ ನಂದಳಿಕೆ ಮಾತನಾಡಿ ಏಳು ಗ್ರಾಮಗಳ ಬಿಲ್ಲವರನ್ನು ಒಗ್ಗೂಡಿಸುವ ಸಲುವಾಗಿ ಮನೆಮನೆಗೆ ಭೇಟಿ ಮಾಡಿ ಸಂಪೂರ್ಣ ವಿವರ ಪಡೆದು ಸಂಘಟನೆಯನ್ನು ಬಲಪಡಿಸಲು ಸಹಕಾರವನ್ನು ಯಾಚಿಸಿ ಸಂಘಕ್ಕೆ ಬರುವಂತೆ ವಿನಂತಿಸುವುದು ಎಂದು ಹೇಳಿದರು.

ನಿಕಟ ಪೂರ್ವಧ್ಯಕ್ಷರು ಪ್ರಾಸ್ತಾವಿಕ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪೂರ್ವ ಧ್ಯಕ್ಷರಾಗಿರುವ ಗೋಪಾಲ ಪೂಜಾರಿ, ಸತೀಶ್ ಪೂಜಾರಿ ಎರ್ಮಳ್ , ಮಹಿಳಾ ಅಧ್ಯಕ್ಷೆ ಪುಷ್ಪ ಸತೀಶ್, ಉಪಾಧ್ಯಕ್ಷರಾಗಿರುವ ಕರುಣಾಕರ ಸುವರ್ಣ ಮತ್ತು ಸತೀಶ್ ಪೂಜಾರಿ ಬೋಳ, ಮಹಿಳಾ ಸ್ಥಾಪಕ ಅಧ್ಯಕ್ಷೆ ಶಕುಂತಲಾ ಬಂಗೇರ, ಕಾರ್ಯದರ್ಶಿ ದೀಪಕ್ ಸಾಲಿಯಾನ್,ಮತ್ತು ಕೋಶಾಧಿಕಾರಿ ಸತೀಶ್ ಪೂಜಾರಿ ಅಬ್ಬನಡ್ಕ ಉಪಸ್ಥಿತರಿದ್ದರು.