ಮಂಗಳೂರು ಕುಟುಂಬ ವೈದ್ಯರ ಅಸೋಸಿಯೇಷನ್ ಇವರಿಂದ ಅಕ್ಟೋಬರ್ 29ರಂದು ಸಂಜೆ 7:00 ದಾ ಸುರೇಶ ಸುರತ್ಕಲ್ ಸಂಸ್ಮರಣ ದಿನಾಚರಣೆ ಓಶಿಯನ್ ಪರ್ಲ್ ಸಭಾಂಗಣದಲ್ಲಿ ನಡೆಯಲಿದೆ. ಡಾ ಸುರೇಶ್ ಸುರತ್ಕಲ್ ಒಮೇಗಾ ಆಸ್ಪತ್ರೆಯ ಆಡಳಿತ ನಿರ್ದೇಶಕರಾಗಿ ದೀನ, ದಲಿತರ, ಬಡವರ ಸಹಾಯ ಹಸ್ತ ನೀಡಿ ಸೇವೆ ಸಲ್ಲಿಸಿರುತ್ತಾರೆ. ಅವರ ಸಂಸ್ಮರಣೆ, ಕುಟುಂಬ ವೈದ್ಯರ ಸಂಘದಿಂದ ನಡೆಯಲಿದೆ ಎಂದು ಅಧ್ಯಕ್ಷ ಸದಾಶಿವ ಪೋಲ್ನಾಯ, ಕಾರ್ಯದರ್ಶಿ ಡಾ ಜಿ ಕೆ ಭಟ್, ಖಜಾಂಚಿ ಡಾ ಅಣ್ಣಯ್ಯ ಕುಲಾಲ್, ಡಾ ಮುಕುಂದ್, ಎಸ್ ಎಲ್ ಭಾರದ್ವಾಜ್, ತುಷಾರ್ ಸುರೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವರದಿ ರಾಯಿ ರಾಜ ಕುಮಾರ್

