ಶಿವರಾಮ ಕಾರಂತ ಪ್ರಶಸ್ತಿ, ಪುರಸ್ಕಾರ ಪ್ರದಾನ

0
6

ಮೂಡುಬಿದಿರೆಯಲ್ಲಿ ಕಳೆದ 34 ವರ್ಷಗಳಿಂದ ನೀಡುತ್ತಿರುವ ಶಿವರಾಮ ಕಾರಂತ ಪ್ರಶಸ್ತಿಯನ್ನು ಈ ಬಾರಿ ಡಾ ತಾಳ್ತಜೆ ವಸಂತಕುಮಾರ, ಟಿ ಎಂ ಸೀತಾರಾಮ್ ಹಾಗೂ ಸಮಾಜ ಮಂದಿರ ಸಭಾ ಗೆ ನೀಡಲಾಯಿತು.

ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ನಡೆದ ಈ ಕಾರ್ಯಕ್ರಮವನ್ನು ತಾಳ್ತಜೆ ವಸಂತಕುಮಾರ ಉದ್ಘಾಟಿಸಿ ಶಿವರಾಮ ಕಾರಂತರಂತಹ ಇಷ್ಟ ಸಾಹಿತಿ, ಕಲೆಗಾರನನ್ನು ಪ್ರತಿ ವರ್ಷವೂ ನೆನಪಿಸಿಕೊಂಡು ಮುಂದುವರಿಯುತ್ತಿರುವುದು ಬಹಳ ಉತ್ತಮ ಸಂಪ್ರದಾಯ. ವಿಜ್ಞಾನ, ರಂಗ ಕಲೆ, ಸಾಹಿತ್ಯ ಗಳ ಎಲ್ಲ ಪ್ರಕಾರಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಮೇರು ಕಲಾವಿದ ಶಿವರಾಮ ಕಾರಂತರು. ಒಬ್ಬರೇ ಆ ಎಲ್ಲ ಕ್ಷೇತ್ರಗಳನ್ನು ಸಾಧಿಸಿದ್ದಾರೆ ಎಂದರೆ ಅತ್ಯಂತ ಅಚ್ಚರಿಯ ಅದ್ಭುತ ಅನುಭವದ ಖಣಿ ಅವರದು ಎಂದು ಹೊಗಳಿದರು.

ನೇರ ನಡೆ, ನುಡಿಯ ಶ್ರೇಷ್ಠ ಸಾಹಿತಿ ಶಿವರಾಮ ಕಾರಂತರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಬದುಕನ್ನು ಹೊಂದಲು ಪ್ರಯತ್ನಿಸಲು ಟಿ ಎನ್ ಸೀತಾರಾಮ್ ಕರೆ ಕೊಟ್ಟರು.

ಶಿವರಾಮ ಕಾರಂತ ಪುರಸ್ಕಾರವನ್ನು ಹಳೆಮನೆ ರಾಜಶೇಖರ, ಡಾ ಕಾ ವೆಂ ಶ್ರೀನಿವಾಸ ಮೂರ್ತಿ ಹಾಗೂ ಡಾ ಕೆ ಎಸ್ ಚೈತ್ರ ಅವರಿಗೆ ನೀಡಿ ಪುರಸ್ಕರಿಸಲಾಯಿತು. ಪುರಸ್ಕಾರ ಸಮಿತಿಯ ಅಧ್ಯಕ್ಷ ಜಯಶ್ರೀ ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಶ್ರೀಪತಿ ಭಟ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಕಾಲೇಜು ಪ್ರಾಂಶುಪಾಲ ಡಾ ರಾಧಾಕೃಷ್ಣ, ಕೋಶಾಚಿಕಾರಿ ಕೃಷ್ಣರಾಜ ಹೆಗ್ಡೆ, ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ್