ಉಡುಪಿ : ಅಕ್ಟೋಬರ್ 2026-27 ಸಾಲಿನ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಪ್ರಥಮ ಕಾರ್ಯಕಾರಿ ಸಮಿತಿ ಸಭೆಯು ಬ್ರಹ್ಮಾವರದ ಹೋಟೆಲ್ ಆಶ್ರಯದಲ್ಲಿ ನಡೆಯಿತು. ಅಧ್ಯಕ್ಷರಾದ ಮಟ್ಟಾರ್ ವಸಂತ್ ಕಿಣಿ ಯವರ ನೇತೃತ್ವದಲ್ಲಿ ಸಂಘದ ವಿಷಯಗಳನ್ನು ಚರ್ಚಿಸಿ ಬಳಿಕ ನಮ್ಮ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರ ವತಿಯಿಂದ ಮಾಜಿ ಅಧ್ಯಕ್ಷರಾದ ಹರೀಶ್ ಕುಂದರ್ ರವರ ಸಾಧನೆಯನ್ನು ಗೌರವಿಸಿ ಅವರಿಗೆ ಸನ್ಮಾನಿಸಲಾಯಿತು.
ಹಾಗು 35 ವರ್ಷದಿಂದ ಸೇವೆ ಸಲ್ಲಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕರಾದ ಸೀತಾರಾಮ್ ಶೆಟ್ಟಿ ಅವರಿಗೂ ಕೂಡ ಗೌರವಿಸಿ ಸನ್ಮಾನಿಸಲಾಯಿತು. ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಭಟ್, ಚಿತ್ತರಂಜನ್ ಭಟ್, ಪ್ರಶಾಂತ್ ಬಾಳಿಗಾ, ಗಣೇಶ್ ಕಿಣಿ, ಜಾನ್ ಆರ್ ಡಿ ಸಿಲ್ವ, ಹರೀಶ್ ಕುಂದರ್, ಅಧ್ಯಕ್ಷ ವಸಂತ್ ಕಿಣಿ, ಉಪಾಧ್ಯಕ್ಷ ವಲ್ಲಭಭಟ್, ಹೃಷಿಕೇಶ್ ಹೆಗ್ಡೆ, ಕೃಷ್ಣ ಪ್ರಸಾದ್ ಶೆಟ್ಟಿ ಕಾರ್ಯದರ್ಶಿ ರಂಜನ್ ಕಲ್ಕೂರ ಹಾಗೂ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

