‘ದಕ್ಷಿಣ ಕನ್ನಡ’ ಬದಲು ‘ಮಂಗಳೂರು’ ಹೆಸರು ಅಧಿಕೃತಗೊಳಿಸಿ : ತುಳು ಕೂಟ ಗೋವಾ ಘಟಕ

0
12

ಗೋವಾ : ಕರ್ನಾಟಕ ಸರ್ಕಾರವು ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಅಧಿಕೃತವಾಗಿ ‘ಮಂಗಳೂರು’ ಎಂದು ಮರುನಾಮಕರಣ ಮಾಡುವ ಪ್ರಕ್ರಿಯೆಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಆಹ್ವಾನಿಸಿರುವುದನ್ನು ತುಳು ಮಹಾಸಭೆ ಇಂಟರ್ನ್ಯಾಷನಲ್ ಗೋವಾ ಘಟಕ ಸ್ವಾಗತಿಸಿದೆ.

ತುಳುನಾಡಿನ ಪ್ರಮುಖ ಕ್ಷೇತ್ರವಾದ ಮಂಗಳೂರಿಗೆ ಅದರ ಐತಿಹಾಸಿಕ ಹೆಸರನ್ನು ಮರುಸ್ಥಾಪಿಸಲು ಇದು ಅತ್ಯಂತ ಅಮೂಲ್ಯವಾದ ಮಂಗಳೂರು ಎಂಬುದು ಕೇವಲ ಒಂದು ಹೆಸರಲ್ಲ, ಅದು ನಮ್ಮ ತುಳುನಾಡಿನ ಪ್ರಾಚೀನ ಇತಿಹಾಸ, ಭಾಷೆ, ಸಂಸ್ಕೃತಿ ಮತ್ತು ಆಸ್ಮಿತೆಯ ಪ್ರತೀಕವಾಗಿದೆ. ಈ ಪ್ರದೇಶದ ಐತಿಹಾಸಿಕ ಹೆಸರನ್ನು ಮರುಸ್ಥಾಪಿಸುವುದು ನಮ್ಮ ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಗಿದೆ. ಹಿಂದೆ ಹಲವು ಬಾರಿ ಈ ಕುರಿತು ಧ್ವನಿ ಎತ್ತಲಾಗಿದ್ದರೂ, ಈ ಬಾರಿ ನಮ್ಮ ಸಮಗ್ರ ತುಳುನಾಡಿನ ಜನರ ಅಪೇಕ್ಷೆಯಂತೆ ಈ ಬದಲಾವಣೆಯು ಅಧಿಕೃತವಾಗಿ ನೆರವೇರಬೇಕು ಎಂಬುದು ನಮ್ಮ ದೃಢವಾದ ಬೇಡಿಕೆಯಾಗಿದೆ.

ಅದ್ದರಿಂದ, ತುಳು ಮಹಾಸಭೆ ಇಂಟರ್ನ್ಯಾಷನಲ್ ಗೋವಾ ಘಟಕ ಸಾರ್ವಜನಿಕರ ಮತ್ತು ತುಳುವರ ಆಶಯಕ್ಕೆ ಸ್ಪಂದಿಸಿ ‘ದಕ್ಷಿಣ ಕನ್ನಡ’ ಜಿಲ್ಲೆಯ ಹೆಸರನ್ನು ಅಧಿಕೃತವಾಗಿ ‘ಮಂಗಳೂರು’ ಎಂದು ಮರುನಾಮಕರಣ ಮಾಡಬೇಕಾಗಿ ತುಳು ಮಹಾಸಭೆ ಇಂಟರ್ನ್ಯಾಷನಲ್ ಗೋವಾ ಘಟಕ ಸಮಿತಿ ಅಧ್ಯಕ್ಷ ಗಣೇಶ್‌ ಶೆಟ್ಟಿ, ಸಮಿತಿ ಕಾರ್ಯದರ್ಶಿ, ಶಶಿದರ್‌ ನಾಯ್ಕ್‌ , ಸಮಿತಿಯ ಪ್ರಧಾನ ಸಂಚಾಲಕರಾದ ಪ್ರಶಾಂತ್‌ ಜೈನ್‌ ವಿನಂತಿಸಿದ್ದಾರೆ.