ಕಟೀಲು : ಕಿನ್ನಿಗೋಳಿ – ಕಟೀಲು ಹೆದ್ದಾರಿಯ ಬಲ್ಲಾಣ ತಿರುವಿನಲ್ಲಿ ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು ಕಾರು ಚಾಲಕ ಅಲ್ಪಸಲ್ಪ ಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿದ್ದಾನೆ.
ಕಟೀಲು ಕಡೆಯಿಂದ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಸ್ವಿಫ್ಟ್ ಕಾರು ಹಾಗೂ ಕಿನ್ನಿಗೋಳಿ ಕಡೆಯಿಂದ ಕಟೀಲು ಕಡೆಗೆ ಹೋಗುತ್ತಿದ್ದ ಐ ಟೆನ್ ಕಾರಿನ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದ ರಥಸಕ್ಕೆ ಒಂದು ಕಾರು ಹೆದ್ದಾರಿ ಬದಿಯ ಮನೆಯ ಆವರಣ ಗೋಡೆಗೆ ಸಿಲುಕಿಕೊಂಡು ನಿಂತಿದ್ದು ತಪ್ಪಿದರೆ ಸುಮಾರು ಹತ್ತು ಅಡಿ ಆಳದ ಕಂದಕಕ್ಕೆ ಬೀಳುವ ಸಾಧ್ಯತೆ ಇತ್ತು. ಇದರಿಂದಾಗಿ ಬಾರಿ ಅಪಾಯ ತಪ್ಪಿದೆ.
ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿದ್ದು ಒಂದು ಕಾರಿನ ಚಾಲಕ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

