
ಕಾಸರಗೋಡಿನ ಕನ್ನಡ ದನಿಯನ್ನು ರಾಜಧಾನಿ ಬೆಂಗಳೂರಿನಲ್ಲಿ ಸಮರ್ಥವಾಗಿ ಮೊಳಗಿಸುವಲ್ಲಿ ರಂಗಸಿರಿ ಯಶಸ್ವಿಯಾಗಲಿ. ಈಗಾಗಲೇ ರಾಷ್ಟ್ರ ಮಟ್ಟದ ಹಲವು ವೇದಿಕೆಗಳಲ್ಲಿ ಪ್ರದರ್ಶನಗಳನ್ನು ನೀಡಿ ಗುರುತಿಸಲ್ಪಟ್ಟ ಸಂಸ್ಥೆಯ ಸಾಧನೆಯ ಪಯಣ ನಿರ್ವಿಘ್ನವಾಗಿ ಸಾಗಲು ಕುಂಬಳೆ ಸೀಮೆಯ ಕಾರಣಿಕ ಶಕ್ತಿಗಳು ಕೃಪೆ ಬೀರಲಿ ಎಂದು ಕಲಾ ಪೋಷಕ, ಪಾಕತಜ್ಞ ಶ್ರೀ ನಾರಾಯಣ ಪ್ರಕಾಶ ಶೆಡ್ಡು ಶುಭಹಾರೈಸಿದರು.
ಕನ್ನಡಮ್ಮನ ಸೆರಗು ಕಾಸರಗೋಡಿನ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಯಕ್ಷಗಾನ ತಂಡದ ಬೆಂಗಳೂರು ಪಯಣಕ್ಕೆ ಕನ್ನಡ ಧ್ವಜ ಹಸ್ತಾಂತರಿಸಿ ಚಾಲನೆ ನೀಡಿ ಅವರು ಮಾತಾಡಿದರು. ತಂಡವು ಬೆಂಗಳೂರು ಚಿಕ್ಕನಾಯಕನಹಳ್ಳಿಯ DSR ಹೈಲ್ಯಾಂಡ್ ಗ್ರೀನ್ಸ್ ನಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರದರ್ಶನ ನೀಡಲಿದೆ.
