ಮೂಡುಬಿದಿರೆ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಾಡ್ಯಾರು ಇಲ್ಲಿನ ವಿದ್ಯಾರ್ಥಿಗಳಿಗೆ ಮೂಡುಬಿದಿರೆಯ ಹಿರಿಯ ವಕೀಲ ಎಂ ಎಸ್ ತಂತ್ರಿ ವಕೀಲರುಗಳಾದ ಕುಮಾರಿ ರೂಪ ಬಲ್ಲಾಳ್ ಕುಮಾರಿ ಅಶ್ವಿನಿ ಇವರು ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ಅಪರಾಧ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು ̤
ಇಂತಹ ಸಂದರ್ಭಗಳಲ್ಲಿ ಮಕ್ಕಳ ಗುರುತುಗಳನ್ನು ಮರೆಮಾಚುವುದಲ್ಲದೆ ಅಗತ್ಯ ನೆರವುಗಳನ್ನು ಕಾನೂನು ಸೇವಾ ಪ್ರಾಧಿಕಾರದ ಮೂಲಕ ನೀಡುವುದಾಗಿ ತಿಳಿಸಿದರು ಶಾಲಾ ಮುಖ್ಯ ಶಿಕ್ಷಕ ಪ್ರಸನ್ನ ವಿ shenoy ಸಹ ಶಿಕ್ಷಕ ರಾಬರ್ಟ್ ಡಿಸೋಜ ಸ್ವಯಂಸೇವಕ ಶಿಕ್ಷಕರಾದ ಪ್ರತಿಭಾ ಮತ್ತು ಪ್ರಜ್ವಲ್ ಉಪಸ್ಥಿತರಿದ್ದರು.

