ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಪೋಷಕರ ಪಾತ್ರ ಅತ್ಯಂತ ಪ್ರಾಮುಖ್ಯವಾಗಿದೆ ರಾಘವೇಂದ್ರ ಪ್ರಭು ಕವಾ೯ಲು

0
9

ಉಡುಪಿ : ಮಕ್ಕಳೇ ಮಾಜದ ಮುಂದಿನ ನಿಜವಾದ ಆಸ್ತಿ ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಪೋಷಕರ ಪಾತ್ರ ಅತ್ಯಂತ ಪ್ರಾಮುಖ್ಯವಾಗಿದೆ ಎಂದು ಖ್ಯಾತ ವ್ಯಕ್ತಿತ್ವ ವಿಕಸನ ತರಬೇತಿದಾರ ರಾಘವೇಂದ್ರ ಪ್ರಭು ಕವಾ೯ಲು ಹೇಳಿದರು.

ಅವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ ದಲ್ಲಿ ಇಂದು ನಡೆದ ಸಮುದಾಯದ ಶಾಲೆ ಮತ್ತು ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಪೋಷಕರ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಮಕ್ಕಳಲ್ಲಿ ಅಡಗಿರುವ ವಿಶೇಷ ಪ್ರತಿಭೆಯನ್ನು ಗುರುತಿಸಿ , ಬೆಳೆಸಿದ್ದಲ್ಲಿ ಆ ಮಗು ಸಮಾಜದ ಉತ್ತಮ ಆಸ್ತಿ ಆಗಬಹುದು. ಮಕ್ಕಳಿಗೆ ನೈತಿಕ ಶಿಕ್ಷಣ, ಉತ್ತಮ ಹವ್ಯಾಸ, ಮೊಬೈಲಿಂದ ಸಾಕಷ್ಟು ದೂರ ಮತ್ತು ಸ್ಪಷ್ಟವಾದ ಗುರಿ ಹೊಂದಲು ಪೋಷಕರು ನೆರವಾಗಬೇಕು ಎಂದು ಹೇಳಿದರು.

ಮಕ್ಕಳಿಗೆ ಹಣದ ಮೌಲ್ಯ ಮಹತ್ವವನ್ನು ತಿಳಿಸಬೇಕಾಗಿದೆ ಮಕ್ಕಳನ್ನೇ ಪೋಷಕರು ನಿಜವಾದ ಆಸ್ತಿಯನ್ನಾಗಿ ಮಾಡಬೇಕು ಎಂದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಉಪಾಧ್ಯಕ್ಷ ವಿಶ್ವಾಸ್ ಎಲ್ ವಹಿಸಿದ್ದರು ಮುಖ್ಯ ಶಿಕ್ಷಕಿ ರೇಣುಕಾ,ಹಿರಿಯ ಶಿಕ್ಷಕಿ ಕಾಂತಿಮಣಿ ಶಿಕ್ಷಕ ವೃಂದ ಮತ್ತು ಎಸ್ ಡಿ ಎಂ ಸಿ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದರು. ಮಕ್ಕಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.