ಭಾರತೀಯ ಲಲಿತ ಕಲೆಗಳಲ್ಲಿ ದೈವತ್ವವನ್ನು ಕಾಣಬಹುದು : ಅರುಣ್ ಕುಮಾರ್ ಹೊಳ್ಳ

0
9

ಭಾರತೀಯ ಲಲಿತಕಲೆಗಳಲ್ಲಿ ದೈವತ್ವದ ಪರಿಕಲ್ಪನೆಯು ಅತ್ಯಂತ ಆಳವಾದ ಮತ್ತು ಅವಿಭಾಜ್ಯವಾದ ಅಂಗವಾಗಿದೆ ಎಂದು ಕರ್ಣಾಟಕ ಬ್ಯಾಂಕ್ ಉರ್ವ ಶಾಖೆಯ ಸೀನಿಯರ್ ಬ್ರಾಂಚ್ ಮೆನೇಜರ್ ಅಭಿಪ್ರಾಯಪಟ್ಟರು. ಅವರು ಭರತಾಂಜಲಿ ನೃತ್ಯ ಸಂಸ್ಥೆ ಕೊಟ್ಟಾರ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಪುರಭವನದಲ್ಲಿ ಹಮ್ಮಿಕೊಂಡಿರುವ ನೃತ್ಯಾಮೃತಂ 2026 ಭಾಗ 2 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.

ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿ ಭರತನಾಟ್ಯದಂತಹ ಕಲಾಪ್ರಕಾರವನ್ನು ಅಭ್ಯಸಿಸಿದಾಗ ಮನಸ್ಸು ಸಮತೋಲನದಲ್ಲಿದ್ದು ಶಾಲಾ ಚಟುವಟಿಕೆಗಳಲ್ಲೂ ಮುಕ್ತವಾಗಿ ಹೊಂದಿಕೊಳ್ಳಲು ಸಹಾಯಕವಾಗುತ್ತದೆ. ಭಾರತೀಯ ಕಲಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕರ್ಣಾಟಕ ಬ್ಯಾಂಕ್ ಸದಾ ಸಹಕಾರವನ್ನು ನೀಡುತ್ತಾ ಬರುತ್ತಿದೆ ಎಂದರು. ಶುಭಾಶಂಸನೆ ಮಾಡಿದ ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್ 31 ವರ್ಷಗಳಿಂದ ಕಲಾ ಚಟುವಟಿಗಳನ್ನು ಶ್ರದ್ಧೆಯಿಂದ ಮಾಡುತ್ತಾ ಬಂದಿರುವ ಸಂಸ್ಥೆಯ ನೃತ್ಯ ಗುರುಗಳಾದ ಶ್ರೀಧರ ಹೊಳ್ಳ, ಪ್ರತಿಮಾ, ಹಾಗೂ ಪ್ರಕ್ಷಿಲ ಜೈನ್ ಇವರುಗಳನ್ನು ಶ್ಲಾಘಿಸಿದರು.

ವಿದುಷಿ ಶಿವಾನಿ ಸುರತ್ಕಲ್ ಕಾರ್ಯಕ್ರಮ ನಿರೂಪಿಸಿ ನಿರ್ದೇಶಕ ಶ್ರೀಧರ ಹೊಳ್ಳ ಸ್ವಾಗತಿಸಿ, ವಿದುಷಿ ಪ್ರತಿಮಾ ಶ್ರೀಧರ್ ವಂದಿಸಿದರು. ಟ್ರಸ್ಟಿ ವೀಣಾ ಶಾಸ್ತ್ರಿ ಉಪಸ್ಥಿತರಿದ್ದರು.