ಗಾರೆ ಗೋಪಾಲ್ ಅವರ ಸಾಮಾಜಿಕ ಸೇವೆಗೆ ರಾಜ್ಯೋತ್ಸವದ ಗೌರವ

0
5

ನ. 1ರಂದು ಕೊಪ್ಪದ ಲಾಲ್ ಬಹದ್ದೂರ್ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪ್ರದಾನ

ಕೊಪ್ಪ : ಆದಿದ್ರಾವಿಡ ಸಮುದಾಯದ ಹೆಮ್ಮೆಯ ಸಾಧಕರಾದ ಗಾರೆ ಗೋಪಾಲ್ ಅವರು ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಹಾಗೂ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ.), ಚಿಕ್ಕಮಗಳೂರು ಜಿಲ್ಲೆ ಇವರ ಮಾಹಿತಿಯಂತೆ, ನವೆಂಬರ್ 1ರ ಭಾನುವಾರ ಸಂಜೆ 5.30ಕ್ಕೆ ಕೊಪ್ಪದ ಲಾಲ್ ಬಹದ್ದೂರ್ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತಾಲೂಕು ಆಡಳಿತ ವತಿಯಿಂದ ಗಾರೆ ಗೋಪಾಲ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.