ರೋಟರಿ ವಿದ್ಯಾ ಸಂಸ್ಥೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ

0
9

ಮೂಡುಬಿದರೆ : ನವಂಬರ್ 1 , 2026 ರಂದು ರೋಟರಿ ವಿದ್ಯಾ ಸಂಸ್ಥೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕೆಂಪು- ಹಳದಿ ಪತಾಕೆ ಹಾಗೂ ಹೂವುಗಳಿಂದ ಸಿಂಗರಿಸಲ್ಪಟ್ಟ ಮಂಟಪದಲ್ಲಿ ಅಲಂಕೃತಗೊಂಡ ಕನ್ನಡಾಂಬೆಯ ಸುಂದರ ಛಾಯಾಚಿತ್ರ ಅಮರಾವತಿ ಸಭಾಂಗಣದಲ್ಲಿ ನಾಡು- ನುಡಿಯ ವೈಭವವು ಪ್ರತಿದ್ವನಿಸಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಪ್ರವೀಣ್ ಚಂದ್ರ ಜೈನ್ ಅವರು ಮಾತನಾಡಿ , ಕನ್ನಡ ನಿತ್ಯೋತ್ಸವ ವಾಗಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಹೃದಯದಲ್ಲಿ ನಾಡು ನುಡಿ ಧ್ವನಿಸಲಿ , ಕನ್ನಡ ನಾಡು ನುಡಿ ನಮ್ಮ ಹೆಮ್ಮೆ ಎಂದು ಹೇಳಿ ಹಿಂದೆ ಅಚ್ಚ ಕನ್ನಡ ಪತ್ರಿಕೆಗಳಿಗಾಗಿ ಶ್ರಮಿಸಿದ ಮಹನೀಯರನ್ನು ನೆನೆಸಿದರು.

ಕಾರ್ಯಕ್ರಮದಲ್ಲಿ ಪುರಾತತ್ವ ತಜ್ಞರೂ ಶ್ರೀ ದವಲಾ ಮಹಾ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರೂ ಆದ ಖ್ಯಾತ ವಾಗ್ಮಿ ಡಾ. ಪುಂಡಿಕೈ ಗಣಪಯ್ಯ ಭಟ್ ಮುಖ್ಯ ಅತಿಥಿಯಾಗಿ ಮಾತನಾಡಿ , ಕರ್ನಾಟಕ ರಾಜ್ಯದ ಹುಟ್ಟು – ಇತಿಹಾಸ – ಕನ್ನಡ ನಾಡಿನ ಬಹುಭಾಷಾ ವೈಶಿಷ್ಟ್ಯ ಹಾಗೂ ಕನ್ನಡದ ಸೊಗಡನ್ನು ವಿವರಿಸುತ್ತಾ , ತನ್ನ ಅಪಾರ ಅನುಭವವನ್ನು ಅಭಿವ್ಯಕ್ತಿ ಪಡಿಸಿದರು. ಕನ್ನಡ ಭಾಷಾ ಬರವಣಿಗೆಯನ್ನು ಉಳಿಸುವ ಅಗತ್ಯತೆಯ ವಿಚಾರದಲ್ಲಿ ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿ , ಸಂಸ್ಥೆಯಲ್ಲಿ ನಡೆದ ಕನ್ನಡ ಕಾರ್ಯಕ್ರಮವನ್ನು ಶ್ಲಾಘಿಸಿ , ಕನ್ನಡ ರತ್ನ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಹೆತ್ತವರನ್ನು ಪ್ರಶಸ್ತಿಫಲಕ ನೀಡಿ ಅಭಿನಂದಿಸಿದರು.

ಈ ಕಾರ್ಯಕ್ರಮದಲ್ಲಿ ರೋಟರಿ ಕೇಂದ್ರೀಯ ಶಾಲಾ ಪ್ರಾಂಶುಪಾಲೆ ಲಕ್ಷ್ಮಿ ಮರಾಠೆ, ಸಂಸ್ಥೆಯ ಆಡಳಿತಾಧಿಕಾರಿ, ವ್ಯವಸ್ಥಾಪಕರು, ಸಂಸ್ಥೆಗಳ ವಿವಿಧ ವಿಭಾಗದ ಸಂಯೋಜಕರು, ಬೋಧಕ- ಬೋಧಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು .

ಕಾರ್ಯಕ್ರಮದಲ್ಲಿ ರೋಟರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್ ಸ್ವಾಗತಿಸಿ, ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯನಿ ತಿಲಕಾ ಅನಂತವೀರ ಜೈನ್ ಧನ್ಯವಾದ ಸಮರ್ಪಿಸಿರು . ಶಿಕ್ಷಕಿ ಮಮತಾ ಎಸ್ ಕಾರ್ಯಕ್ರಮ ನಿರೂಪಿಸಿದರು.