ಮೂಡುಬಿದಿರೆ ಸ್ವಸಹಾಯ ಸಂಘಗಳ ವಾರ್ಷಿಕ ಕ್ರೀಡಾಕೂಟ 2026

0
7

ವಂದೇ ಮಾತರಂ ಸೌಹಾರ್ದ ಸಹಕಾರಿ ಸಂಘದಿಂದ ಪ್ರವರ್ತಿತ ಸ್ವ ಸಹಾಯ ಸಂಘಗಳ ವಾರ್ಷಿಕ ಕ್ರೀಡಾಕೂಟ ನವೆಂಬರ್ ಒಂದರಂದು ಕಡಲ ಕೆರೆ ಪ್ರೇರಣಾ ಶಾಲೆಯಲ್ಲಿ ನಡೆಯಿತು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರಿತೇಶ್ ಶೆಟ್ಟಿ ದೀಪ ಬೆಳಗಿ ಕ್ರೀಡಾಕೂಟವನ್ನು ಉದ್ಘಾಟಿಸಿ ಕ್ರೀಡಾಕೂಟದಲ್ಲಿ ಲವಲವಿಕೆಯಿಂದ ಭಾಗವಹಿಸಿ ಯಶಸ್ಸನ್ನು ಪಡೆಯಿರಿ ಎಂದು ಹಾರೈಸಿದರು. ಸಂಘದ ಅಧ್ಯಕ್ಷ ಎಂ ವಾಸುದೇವ ಭಟ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರೇರಣಾ ಶಾಲೆಯ ಸಂಚಾಲಕ ಶಾಂತಾ ರಾಮ ಕುಡ್ವ , ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕೇಶ್ ಹಾಜರಿದ್ದರು.

ಮಾವಿನಕಟ್ಟೆ ಓಂ ಶಿವಾಯ ಸ್ವಸಹಾಯ ಸಂಘದ ಗೀತಾ ಪ್ರಾರ್ಥಿಸಿದರು. ವಂದೇ ಮಾತರಂನ ಲೆಕ್ಕಾಧಿಕಾರಿ ನಯನ ಸ್ವಾಗತಿಸಿದರು. ಇರುವೈಲು ಇಂಚರ ಸ್ವಸಹಾಯ ಸಂಘದ ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ವಂದೇಮಾತರಂ ನ ನಿಖಿತಾ ವಂದಿಸಿದರು.

ವರದಿ ರಾಯಿ ರಾಜ ಕುಮಾರ್