
ಉನ್ನತ, ಉತ್ತಮ ಜ್ಞಾನದಿಂದ ನೂತನ ಸ್ಟಾರ್ಟ್ ಅಪ್ ಪ್ರಾರಂಭಿಸಿ ಉತ್ತೇಜನ ಪಡೆಯಿರಿ-ರಾಜೇಶ್ ಚೌಟ
ಮೂಡುಬಿದಿರೆಯ ಎಸ್ಎನ್ ಎಂ ಪಾಲಿಟೆಕ್ನಿಕ್ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭ ಅಕ್ಟೋಬರ್ 31ರಂದು ನಡೆಯಿತು. ಮುಖ್ಯ ಅತಿಥಿಯಾಗಿ ರಾಜಲಕ್ಷ್ಮಿ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ರಾಜೇಶ್ ಚೌಟ ಮಾತನಾಡಿ ಬದುಕನ್ನು ಇರುವಂತೆ ಸ್ವೀಕರಿಸಿ. ಶಿಕ್ಷಣದಿಂದ ಜ್ಞಾನವನ್ನು ಹೆಚ್ಚಿಸಿಕೊಂಡು ಬೆಳೆಯಿರಿ. ಸಂಸ್ಥೆಯಲ್ಲಿ ಕಲಿಸುವುದನ್ನು ನಿಷ್ಠೆಯಿಂದ ಕಲಿತು ಅದಕ್ಕೆ ಪೂರಕವಾದ ವಿಶೇಷ ಪರಿಣಾಮ ಜ್ಞಾನವನ್ನು ಪ್ರಾಯೋಗಿಕ ಕಲಿಕೆಯಿಂದ ಹೊಂದಲು ಸರ್ಟಿಫಿಕೇಟ್ ಕೋರ್ಸ್ ಗಳನ್ನು ಕೂಡ ಮಾಡಿಕೊಳ್ಳಿ. ಉದಾಹರಣೆಗೆ ರೋಬೋಟಿಕ್ ಕಲಿಕೆಯಿಂದ ಪ್ರಾಯೋಗಿಕ ಜ್ಞಾನ ಹೊಂದಿ ಹಲವಾರು ಮಂದಿ ತಕ್ಷಣ ಉದ್ಯೋಗವನ್ನು ಪಡೆಯುತ್ತಿದ್ದಾರೆ. ಇಂತಹ ಉತ್ತಮ ಜ್ಞಾನದಿಂದ ನೂತನ ಸ್ಟಾರ್ಟ್ ಅಪ್ಗಳನ್ನು ಪ್ರಾರಂಭಿಸಿ ಸರಕಾರದ ಹಾಗೂ ಮೈಟ್ ಸಂಸ್ಥೆಯ ಉತ್ತೇಜನವನ್ನು ಪಡೆಯುವಂತೆ ವಿದ್ಯಾರ್ಥಿಗಳನ್ನು ಕೇಳಿಕೊಂಡರು.
ಕಾಲೇಜಿನ ಹಳೆ ವಿದ್ಯಾರ್ಥಿ ಲೈಫ್ ಕೋಚ್ ನ ಕಾರ್ಪೊರೇಟ್ ಟ್ರೈನರ್ ಇನ್ನೋಸೆಂಟ್ ಜಾನ್ ಬಾಸ್ಕೋ ತಮ್ಮ ಹಳೆಯ ನೆನಪುಗಳನ್ನು ಮದುಕಳಿಸಿಕೊಂಡು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳು ಅವರ ದೈನಂದಿನ ಕೆಲಸಗಳನ್ನು ಅವರೇ ಮಾಡಿಕೊಳ್ಳುವುದರಿಂದ ಸಾಕಷ್ಟು ಅನುಭವವನ್ನು ಪಡೆಯಲು ಸಾಧ್ಯವಿದೆ. ಪ್ರತಿದಿನವೂ ಒಂದಲ್ಲ ಒಂದು ಕ್ರೀಡೆ ಅಥವಾ ವ್ಯಾಯಾಮದಲ್ಲಿ ದೇಹ ಮನಸ್ಸುಗಳನ್ನು ತೊಡಗಿಸುವುದರಿಂದ ಮತ್ತು ಮೊಬೈಲ್ ನಿಂದ ಸಾಧ್ಯವಾದಷ್ಟು ದೂರ ಇರುವುದರಿಂದ ಹೆಚ್ಚು ಲಾಭವನ್ನು ಹೊಂದಲು ಸಾಧ್ಯವಿದೆ ಎಂದು ಹಲವಾರು ಉದಾಹರಣೆಗಳ ಮೂಲಕ ತಿಳಿಸಿಕೊಟ್ಟರು.
ನಿವೃತ್ತ ಉಪನ್ಯಾಸಕ ಸುರೇಶ್ ಭಂಡಾರಿ ಯವರನ್ನು ಸನ್ಮಾನಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿಯ ಚೇರ್ಮನ್ ಮಾಜಿ ಸಚಿವ ಕೆ ಅಭಯ ಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಎಸ್ಡಿ ಸಂಪತ್ ಸಾಮ್ರಾಜ್ಯ, ವಿದ್ಯಾರ್ಥಿ ಪ್ರತಿನಿಧಿಗಳು ಹಾಜರಿದ್ದರು.
ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲೆ ನೊರೊನ್ನಾ ತಾರಿನಾ ರೀಟಾ ವಾರ್ಷಿಕ ವರದಿ ವಾಚಿಸಿ ಸಂಸ್ಥೆಯ ಸಾಧನೆಯನ್ನು ತೆರೆದಿಟ್ಟರು. ವಿಭಾಗೀಯ ಮುಖ್ಯಸ್ಥ ಹರೀಶ್ ತಂತ್ರಿ ಸ್ವಾಗತಿಸಿದರು. ಅಬ್ದುಲ್ ವಹಿದ್, ಪ್ರಿಯಾ ಭಟ್, ವೀರತ್ ಅತಿಥಿಗಳನ್ನು ಪರಿಚಯಿಸಿದರು. ಸುರೇಶ್ ಡಿ ಬಿ, ಹರ್ಷ, ವಿಜೇತರ ಪಟ್ಟಿಯನ್ನು ವಾಚಿಸಿದರು. ಶಮಿತಾ ಆರ್ ಕಾರ್ಯಕ್ರಮ ನಿರ್ವಹಿಸಿದರು. ಚೈತ್ರ ಎ ವಂದಿಸಿದರು.
ವರದಿ ರಾಯಿ ರಾಜ ಕುಮಾರ್
