ಶ್ರೀ ವಿಠೋಬ ಭಜನಾ ಮಂಡಳಿ ಇನ್ನಂಜೆ : ನೂತನ ಆಡಳಿತ ಮಂಡಳಿ ಆಯ್ಕೆ

0
7

ಕಾಪು: ತಾಲೂಕಿನ ಗೋಳಿಕಟ್ಟೆ ಇನ್ನಂಜೆಯ ಶ್ರೀ ವಿಠೋಬ ಭಜನಾ ಮಂಡಳಿಯ 2026ರಿಂದ 2028ರವರೆಗಿನ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಗಿದೆ.

ನೂತನ ಅಧ್ಯಕ್ಷರಾಗಿ ರಾಘವೇಂದ್ರ ಕುಲಾಲ್ ಬಿಜಿಕ್ರೆಕಾಡು, ಉಪಾಧ್ಯಕ್ಷರಾಗಿ ಸತೀಶ್ ಕುಲಾಲ್ ಗೋಳಿಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಉದಯ್ ಜಿ. ಇನ್ನಂಜೆ, ಜೊತೆ ಕಾರ್ಯದರ್ಶಿಯಾಗಿ ರಘುರಾಮ ಕುಲಾಲ್ ದರ್ಕಾಸು ಮನೆ ಹಾಗೂ ಕೋಶಾಧಿಕಾರಿಯಾಗಿ ಅನಿಲ್ ಕುಲಾಲ್ ಗೋಳಿಕಟ್ಟೆ ಆಯ್ಕೆಯಾಗಿದ್ದಾರೆ.

ಇವರೊಂದಿಗೆ ಮಂಡಳಿಯ ಇತರ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ನೂತನ ಆಡಳಿತ ಮಂಡಳಿಯು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಭಜನಾ ಮಂಡಳಿಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಮುನ್ನಡೆಸುವ ಜವಾಬ್ದಾರಿ ವಹಿಸಲಿದೆ.