ಸು ಶಿ ಶಾಂತಕುಮಾರ್ ರವರಿಗೆ ಮೆಚ್ಚುಗೆ ಬಹುಮಾನ

0
23

ಉಡುಪಿ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಾಹಿನಿ (ರಿ ) ಕೇಂದ್ರ ಸಮಿತಿ ಮಂಗಳೂರು ಹಾಗೂ ಉಡುಪಿ ಘಟಕದಿಂದ ವಿಶುಕುಮಾರ್ ದತ್ತಿನಿದಿ ಸಹಯೋಗದಲ್ಲಿ “ವಿಶು ವಿಹಂಗಮ” ಎಂಬ ರಾಜ್ಯ ಮಟ್ಟದ ಆನ್ಲೈನ್ ಕೃತಿ ವಿಮರ್ಶಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ಚಾಮರಾಜನಗರ ಜಿಲ್ಲೆಯ ಕವಿ ಹಾಗೂ ಬರಹಗಾರರಾದ ಸು ಶಿ ಶಾಂತಕುಮಾರ್ ಹರವೆ ರವರು ಭಾಗವಹಿಸಿ ವಿಶುಕುಮಾರ್ ರವರ “ಕರ್ಮ” ಕಾದಂಬರಿಯನ್ನು ಕುರಿತು ವಿಮರ್ಶಾ ಲೇಖನವನ್ನು ಬರೆದಿದ್ದರು ಹಾಗೂ ಮೆಚ್ಚುಗೆಯ ಬಹುಮಾನಕ್ಕೆ ಪಾತ್ರರಾಗಿದ್ದರು.

ಆದ್ದರಿಂದ ಇವರನ್ನು ನವಂಬರ್ 1, 2026 ರಂದು ಭಾನುವಾರ ಉಡುಪಿಯ ಯಕ್ಷಗಾನ ಕಲಾರಂಗ (ಐವೈಸಿ ) ದಲ್ಲಿ ನಡೆದ “ವಿಶು ವಿಹಂಗಮ” ಎಂಬ ಕಾರ್ಯಕ್ರಮದಲ್ಲಿ ಮೆಚ್ಚುಗೆ ಬಹುಮಾನವನ್ನು ನೀಡಿ ಅಭಿನಂದಿಸಲಾಯಿತು ಎಂದು ಯುವ ವಾಹಿನಿ (ರಿ ) ಕೇಂದ್ರ ಸಮಿತಿಯ ಸ್ಪರ್ದಾ ಸಂಚಾಲಕರಾದ ಶ್ರೀ ಲತೀಶ್ ಎಂ ಸಂಕೋಲಿಗೆ ರವರು ತಿಳಿಸಿದ್ದಾರೆ.