
ಸಜೀಪಮೂಡ: ಶ್ರೀ ಬಾಲ ಗಣಪತಿ ದೇವಸ್ಥಾನ, ಅನ್ನ ಪಾಡಿ ಶ್ರೀ ಕ್ಷೇತ್ರದಲ್ಲಿ ಬಾಲ ಗಣಪತಿ ಹೋಮ ಹಾಗೂ ಬಾಣೆಶಿ ಹೋಮ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.
ಸಜೀಪಮಾಗಣೆ ತಂತ್ರಿಗಳಾದ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಭಕ್ತಿಭಾವದಿಂದ ನಡೆದ ಹೋಮದಲ್ಲಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಶ್ರೀನಿವಾಸ ಶಿವ ತಾಯ, ರಮೇಶ್ ಅನ್ನ ಪಾಡಿ, ದೇವಸ್ಥಾನದ ಪ್ರಬಂಧಕರಾದ ಪ್ರಶಾಂತ್ ಕುಮಾರ್, ವೆಂಕಟರಮಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ವಾತಾವರಣದಲ್ಲಿ ನಡೆದ ಹೋಮ ಕಾರ್ಯಕ್ರಮವು ಭಕ್ತರ ಗಮನ ಸೆಳೆಯಿತು.
