ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

0
8

ಲಯನ್ಸ್ ಇಂಟರ್‌ನ್ಯಾಷನಲ್‌ನ ಜಾಗತಿಕ ಸೇವಾ ಕ್ಷೇತ್ರಗಳ (Global Causes) ಅಡಿಯಲ್ಲಿ ಹಮ್ಮಿಕೊಂಡಿರುವ ಸೇವಾ ಚಟುವಟಿಕೆಯ ಭಾಗವಾಗಿ, ಲಯನ್ಸ್ ಕ್ಲಬ್ ಆಫ್ ಮಂಗಳೂರು ಸೋಮೇಶ್ವರ ವತಿಯಿಂದ ಅತ್ಯಂತ ಬಡ ಹಾಗೂ ಅಗತ್ಯವಿರುವ ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.

ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ (PHC) ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಡಾ. ಸವಿತಾ ಗಟ್ಟಿ ಅವರು ಉದ್ಘಾಟಿಸಿದರು. ಕ್ಲಬ್ ಅಧ್ಯಕ್ಷ ಲಯನ್ ವಿಜಯನ್ ಕೆ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕ್ಲಬ್ ಉಪಾಧ್ಯಕ್ಷ ಲಯನ್ ಕೆ. ವಿಜಯಕುಮಾರ್ ಅವರು ಸ್ವಾಗತಿಸಿದರು. ಲಯನ್ ಶಶಿಕುಮಾರ್ ನಾಯರ್ ಮತ್ತು ಲಯನ್ ಫ್ಲೇವಿಯಾ ಡಿಸೋಜಾ ಅವರು ಮಾತನಾಡಿ, ಮಾನವೀಯ ಸೇವೆಯ ಮಹತ್ವ ಹಾಗೂ ಸಮಾಜದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವು ನೀಡುವ ಅಗತ್ಯತೆಯನ್ನು ಒತ್ತಿಹೇಳಿದರು.

ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ PHCO ಎಂ.ಎನ್. ಸುವರ್ಣ ಅವರು ವಂದನಾರ್ಪಣೆ ಸಲ್ಲಿಸಿದರು.

ಸಮಾಜದ ಅಶಕ್ತ ಕುಟುಂಬಗಳಿಗೆ ನೆರವಾಗುವ ಲಯನ್ಸ್ ಸಂಸ್ಥೆಯ ಬದ್ಧತೆಯನ್ನು ಈ ಸೇವಾ ಕಾರ್ಯವು ಮತ್ತೊಮ್ಮೆ ಪ್ರತಿಬಿಂಬಿಸಿತು.