
ಹೆಬ್ರಿ : ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯನ್ನು ಒದಗಿಸುವ ಕಾರ್ಯವನ್ನು ಶಾರದೋತ್ಸವ ಮೂಲಕ ನೀಡಲಾಗುತ್ತಿದೆ. ಶಾರದಾ ಮಾತೆಯ ಅನುಗ್ರಹದಿಂದ, ಎಲ್ಲರ ಪೂರ್ಣ ಪ್ರಮಾಣದ ಸಹಕಾರದಿಂದ ಶಾರದೋ ತ್ಸವ ಊರಿನ ಹಬ್ಬವಾಗಿ ಮೂಡಿಬಂದಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ದುಡಿದ ಸಮಿತಿಯ ಸರ್ವ ಪದಾಧಿಕಾರಿಗಳನ್ನು ಅಭಿನಂದಿಸುತ್ತೇನೆ. ಮುದ್ರಾಡಿ ಗ್ರಾಮದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲೂ ಒಟ್ಟಾಗಿ ದುಡಿದು ಗ್ರಾಮದ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸೋಣ ಎಂದು ಮುದ್ರಾಡಿ ಸಾರ್ವಜನಿಕ ಶಾರದೋತ್ಸವ ಸಮಿತಿ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.

ಅವರು ಮುದ್ರಾಡಿ ಗುರುರಕ್ಷಾ ಸೌಹಾರ್ದ ಸಹಕಾರಿ ಸೊಸೈಟಿ ಆವರಣದಲ್ಲಿ ನಡೆದ 7 ನೆ ವರ್ಷದ ಸಾರ್ವಜನಿಕ ಶಾರದೋತ್ಸವದ ಲೆಕ್ಕಪತ್ರ ಮಂಡನೆ, ಕೃತಜ್ಞತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇದೇ ಸಂದರ್ಭದಲ್ಲಿ ಮುದ್ರಾಡಿಯ ಕಲಾವಿದರು ಪ್ರದರ್ಶಿಸಿದ ಪಿರಬನ್ನಗ -2 ನಾಟಕದ ಖ್ಯಾತ ಕಲಾವಿದ ಸುರೇಶ್ ಶೆಟ್ಟಿಗಾರ್ ಹಾಗೂ ತಂಡದವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಬಾಯರಿ ಕಬ್ಬಿನಾಲೆ, ಆದರ್ಶ ಎಂ. ಪೂಜಾರಿ,ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಉಮೇಶ್ ಬಿ. ಕೆ., ವಿವಿಧ ಸಮಿತಿಯ ಸಂಚಾಲಕರುಗಳಾದ ಸತೀಶ್ ಸೇರಿಗಾರ್ ಬೆಳಗುಂಡಿ,ಸಂತೋಷ್ ಪೂಜಾರಿ ನೆಕ್ಕರ್ ಬೆಟ್ಟು,ರವಿ ಪೂಜಾರಿ ಪಾದೆಮನೆ, ಶಿವಾನಂದ ಶೆಟ್ಟಿ ಮುದ್ರಾಡಿ,ವಿಶು ಕುಮಾರ್ ಸುವರ್ಣ ಮುದ್ರಾಡಿ,ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.ಸಮಿತಿಯ ಕೋಶಾಧಿಕಾರಿ ಬಲ್ಲಾಡಿ ಚಂದ್ರಶೇಖರ ಭಟ್ ಲೆಕ್ಕಪತ್ರ ಮಂಡಿಸಿದರು. ಶಿಕ್ಷಕ ಪ್ರಕಾಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಗೌರವ ಸಲಹೆಗಾರ ಸಂತೋಷ್ ಕುಮಾರ್ ಶೆಟ್ಟಿ ವಂದಿಸಿದರು.
